×
Ad

ಎಂನರೇಗಾ ಯೋಜನೆಯ ಹಣ ದುರುಪಯೋಗ: ಕೇಂದ್ರ ಸರಕಾರವೇ ಸಂಪೂರ್ಣ ಹೊಣೆ ಎಂದ ಕಾಂಗ್ರೆಸ್

Update: 2021-08-21 22:25 IST

ಹೊಸದಿಲ್ಲಿ, ಆ.21: ಎಂನರೇಗಾ ಯೋಜನೆಯಲ್ಲಿ ಆಗಿರುವ ಭಾರೀ ಪ್ರಮಾಣದ ಹಣದ ದುರುಪಯೋಗಕ್ಕೆ ಕೇಂದ್ರ ಸರಕಾರ ಸಂಪೂರ್ಣ ಹೊಣೆಗಾರನಾಗಿದ್ದು, ಈ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಯೇಕಾಗಿದೆಯೆಂದು ಕಾಂಗ್ರೆಸ್ ಪಕ್ಷದ ವಕ್ತಾರ ಪವನ್ ಖೇರಾ ಆಗ್ರಹಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಂನರೇಗಾ ಯೋಜನೆಯಡಿ ದುರುಪಯೋಗವಾದ ಹಣವನ್ನು ಕೇಂದ್ರ ಸರಕಾರವು ವಸೂಲು ಮಾಡಬೇಕು ಮತ್ತು ಅದನ್ನು ಕೋವಿಡ್-19 ಕಳಪೆ ನಿರ್ವಹಣೆಯಿಂದಾಗಿ ಸಾಕಷ್ಟು ಬಾಧಿತರಾದ ಬಡವರು ಹಾಗೂ ಕಡೆಗಣಿಸಲ್ಪಟ್ಟವರಿಗೆ ಪರಿಹಾರ ನೀಡಲು ಬಳಸಬೇಕೆಂದು ಕಾಂಗ್ರೆಸ್ ಒತ್ತಾಯಿಸುವುದಾಗಿ ಅವರು ಹೇಳಿದರು.

ಜಾರ್ಖಂಡ್ ನಲ್ಲಿ ಬಿಜೆಪಿಯ ಆಳ್ವಿಕೆಯಿದ್ದ ಅವಧಿಯಲ್ಲಿ ಎಂನರೇಗಾ ಯೋಜನೆಯಡಿ 51.29 ಕೋಟಿ ರೂ. ದುರುಪಯೋಗವಾಗಿದೆಯೆಂದು ಖೇರಾ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News