×
Ad

ಅಫ್ಘಾನ್ ಪರಿಸ್ಥಿತಿ ಕುರಿತ ಪ್ರಶ್ನೆಗೆ ಕಣ್ಣೀರಿಟ್ಟ ಸಂಸದ ನರೀಂದರ್ ಸಿಂಗ್ ಖಾಲ್ಸಾ

Update: 2021-08-22 13:18 IST
photo: ANI

ಹೊಸದಿಲ್ಲಿ: ರವಿವಾರ ಬೆಳಿಗ್ಗೆ ಭಾರತೀಯ ವಾಯುಪಡೆ ವಿಮಾನದಲ್ಲಿ ಕಾಬೂಲ್‌ನಿಂದ ಹೊಸದಿಲ್ಲಿಯ ಹಿಂಡನ್ ವಾಯುನೆಲೆಗೆ ಆಗಮಿಸಿದ್ದ 24 ಸಿಖ್ಖರಲ್ಲಿ ಇಬ್ಬರು ಅಫ್ಘಾನ್ ಸೆನೆಟರ್ ಗಳು ಇದ್ದರು. ಅಫ್ಘಾನಿಸ್ತಾನದ ಸಂಸತ್ ಸದಸ್ಯ ನರೀಂದರ್ ಸಿಂಗ್ ಖಾಲ್ಸಾ ಅವರು ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹೇಗಿದೆ ಎಂದು ಭಾರತದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕಣ್ಣೀರು ಹಾಕಿದರು.

ಸಂಸದನಾಗಿ ತನ್ನ ದೇಶವನ್ನು ತೊರೆಯುವ ಬಗ್ಗೆ ನಿಮಗೆ ಏನೆನಿಸಿತು ಎಂದು ಕೇಳಿದಾಗ  "ಈ ವಿಚಾರ  ನನ್ನನ್ನು ಅಳುವಂತೆ ಮಾಡುತ್ತದೆ" ಎಂದು ಸಿಂಗ್ ಹೇಳಿದರು.

"ನಾವು ಅಫ್ಘಾನಿಸ್ತಾನದಲ್ಲಿ ಈ ರೀತಿಯ ಪರಿಸ್ಥಿತಿಯನ್ನು ನೋಡಿಲ್ಲ ಹಾಗೂ  ಈಗ ನಾವು ಅದನ್ನು ನೋಡುತ್ತಿದ್ದೇವೆ. ಎಲ್ಲವೂ ಮುಗಿದಿದೆ. ಕಳೆದ 20 ವರ್ಷಗಳಲ್ಲಿ ಸರಕಾರ ನಿರ್ಮಿಸಿದ  ಎಲ್ಲವೂ ಕೂಡ ಈಗ ಮುಗಿದಿದೆ. ಈಗ ಎಲ್ಲವೂ ಶೂನ್ಯವಾಗಿದೆ”ಎಂದು ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಸಿಂಗ್ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಇಬ್ಬರು ಸಂಸದರಲ್ಲಿ ಒಬ್ಬರಾಗಿದ್ದಾರೆ.  ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಶನಿವಾರ ಐಎಎಫ್ ವಿಮಾನ ಹತ್ತದಂತೆ ತಡೆದ 72 ಅಫ್ಘಾನ್ ಸಿಖ್ಖರು ಹಾಗೂ  ಹಿಂದೂಗಳು   ಕಾಬೂಲ್ ನಿಂದ ರವಿವಾರ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News