×
Ad

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 20 ಪೈಸೆ ಇಳಿಕೆ

Update: 2021-08-22 15:50 IST

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ರವಿವಾರ ಭಾರತದಾದ್ಯಂತ ಇಂಧನ ಬೆಲೆಯನ್ನು ಸ್ವಲ್ಪ ಕಡಿಮೆ ಮಾಡಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಯ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಹಾಗೂ  ಡೀಸೆಲ್ ದರಗಳನ್ನು 20 ಪೈಸೆ ವರೆಗೆ ಇಳಿಸಲಾಗಿದೆ.

ಈ ವಾರದ ಆರಂಭದಲ್ಲಿ ತೈಲ ಚಿಲ್ಲರೆ ವ್ಯಾಪಾರಿಗಳು ಸತತ ಮೂರು ಸಂದರ್ಭಗಳಲ್ಲಿ ಡೀಸೆಲ್ ಬೆಲೆಯನ್ನು ಇಳಿಸಿದ್ದು, ಪ್ರತಿ ಲೀಟರ್‌ಗೆ 60 ಪೈಸೆ ಇಳಿಕೆಯಾಗಿದೆ. ಹೊಸ ಬೆಲೆಗಳು ಜಾರಿಗೆ ಬಂದ ನಂತರ ದೇಶದ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್ ಹಾಗೂ  ಡೀಸೆಲ್ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದ್ದು ಪ್ರತಿ ಲೀಟರ್‌ಗೆ ಕ್ರಮವಾಗಿ ರೂ. 101.64  ಹಾಗೂ ರೂ. 89.07 ರಷ್ಟಿದೆ.

ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ 17 ಪೈಸೆ ಇಳಿಕೆ ಕಂಡ ನಂತರ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ. 107.66 ರಷ್ಟಿತ್ತು, ಡೀಸೆಲ್ ದರ  20 ಪೈಸೆ ಇಳಿದು ರೂ. 96.64 ಕ್ಕೆ ತಲುಪಿದೆ. ಇತರ ಮೆಟ್ರೋ ನಗರಗಳಿಗೆ ಸಂಬಂಧಿಸಿದಂತೆ ಚೆನ್ನೈ ಪೆಟ್ರೋಲ್ ದರದಲ್ಲಿ 15 ಪೈಸೆ ಇಳಿಕೆ ಕಂಡಿದ್ದು ಲೀಟರ್‌ಗೆ ರೂ. 99.32 ಕ್ಕೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 18 ಪೈಸೆ ಇಳಿದು ರೂ. 93.66 ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್  ಪ್ರತಿ ಲೀಟರ್‌ಗೆ ರೂ.  105.13 ಹಾಗೂ  ಡೀಸೆಲ್‌ಗೆ ರೂ.  94.49 ಆಗಿದೆ. ಕೋಲ್ಕತ್ತಾದಲ್ಲಿ ಖರೀದಿದಾರರು ಈಗ ಪೆಟ್ರೋಲ್‌ಗೆ ರೂ. 101.93 ಹಾಗೂ ಡೀಸೆಲ್ ಲೀಟರ್ ಗೆ ರೂ. 92.13  ಪಾವತಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News