ಕ್ಯಾಲಿಗ್ರಫಿ ಮೂಲಕ ಕನಸುಗಳಿಗೆ ಬಣ್ಣ ಹಚ್ಚಿದ ಮುಸಾಹಿರ: ಜೀವನದ ಭಾಗವಾದ ಹವ್ಯಾಸ

Update: 2021-08-23 14:08 GMT

ಮಂಗಳೂರು: ಜೀವನದ ಕನಸುಗಳಿಗೆ ಕ್ಯಾಲಿಗ್ರಫಿ ಮೂಲಕ ಬಣ್ಣ ಹಚ್ಚುತ್ತಿರುವ ಇವರ ಹೆಸರು ಮುಸಾಹಿರ. ಪ್ರಯೋಗ ಎನ್ನುವ ದಿಶೆಯಲ್ಲಿ ಪ್ರಾರಂಭಿಸಿದ ಕಾಲಿಗ್ರಫಿ ಕಲೆಯೂ ಅವರ ಜೀವನದ ಭಾಗವಾಗಿ ಬಿಟ್ಟಿತು. ಬರಬರುತ್ತಾ ಹೆಚ್ಚಿನ ಸಮಯವನ್ನು ಕಾಲಿಗ್ರಫಿಗಾಗಿ ವ್ಯಯಮಾಡತೊಡಗಿದ ಮುಸಾಹಿರ, ಆ ಮೂಲಕ ತನ್ನ ಮನೆಯ ಗೋಡೆಗಳನ್ನು ಸುಂದರವಾಗಿ ಅಲಂಕರಿಸಿದರು. ಇದೀಗ ಅದುವೇ ಅವರ ಜೀವನದ ಭಾಗವಾಗಿದೆ.

ತಮ್ಮ ಕಲೆಗೆ ತಾಯಿಯ ಪ್ರೋತ್ಸಾಹ ದೊರೆತಾಗ ಮುಂಬೈ ಮೂಲದ ಸಲೀಂ ಎಂಬವರ ಮೂಲಕ ಕ್ಯಾಲಿಗ್ರಫಿ ಕಲೆಯನ್ನು ಕಲಿಯಲು ತೀರ್ಮಾನಿಸಿದರು.


 
ತುಲೂತ್, ಸ್ಕ್ರಿಪ್ಟ್ ಜೊಮೆಟ್ರಿಕ್ ಪೇಟೇರ್ನ್ ಮೂಲಕ ಮರ ಮತ್ತು ಕ್ಯಾನ್ವಾಸ್‌ನಲ್ಲಿ ಮುಸಾಹಿರ ಅವರ ಕಲೆ ಅರಳುತ್ತದೆ. ಮಾತ್ರವಲ್ಲದೆ ಪೈಂಟಿಂಗ್ ಮತ್ತು ಇತರ ಆರ್ಟ್ ವರ್ಕ್‌ಗಳನ್ನೂ ಅವರು ಮಾಡುತ್ತಾರೆ. ಮಾಡಿದ ವರ್ಕ್‌ಗಳನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ ಉತ್ತಮ ಆದಾಯವನ್ನೂ ಅವರು ಗಳಿಸುತ್ತಾರೆ. ಇನ್ಸ್ಟಾಗ್ರಾಮ್‌ನಲ್ಲಿ ಅವರಿಗೆ ಬ್ಯುಸಿನೆಸ್ ಖಾತೆ ಕೂಡ ಇದ್ದು, ಮಂಗಳೂರು ಸುತ್ತಮುತ್ತಲಿನ ಆರ್ಟ್ ವರ್ಕ್‌ಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲೂ ಮುಸಾಹಿರ ಅವರ ಕೃತಿಗಳಿಗೆ ಉತ್ತಮ ಬೇಡಿಕೆ ಇದೆ.


 
ತಾನು ರಚಿಸಿದ ಕಾಲಿಗ್ರಫಿ ವರ್ಕ್‌ಗಳ ಎಕ್ಸಿಬಿಷನ್ ಏರ್ಪಡಿಸುವುದು ಮತ್ತು ಬುಲೆಟ್ ಬೈಕ್‌ನಲ್ಲಿ ಇಡೀ ಭಾರತ ಸುತ್ತಿಬರುವುದು ಅವರ ಎರಡು ಕನಸುಗಳಾಗಿವೆ. ತನ್ನ ಕನಸುಗಳನ್ನು ನನಸಾಗಿಸಲು ಪಣತೊಟ್ಟಿರುವ ಮುಸಾಹಿರ, ಅದರ ಪ್ರಯತ್ನದಲ್ಲಿದ್ದಾರೆ. ಮಂಗಳೂರಿನಲ್ಲಿ ನೆಲೆಸಿರುವ ಕೇರಳೀಯ ಉದ್ಯಮಿ, ಮಾಜಿ ಕರ್ನಾಟಕ ರಾಜ್ಯ ಫುಟ್‌ಬಾಲ್ ಆಟಗಾರ ಅಬ್ದುಲ್ಲ ಮತ್ತು ನಸ್ರಿಯಾ ದಂಪತಿಯ ಪುತ್ರಿ. ಮಾಸುನ್ ಟೈಲ್ಸ್ ನ ಮುನೀರ್ ಅವರ ಪತ್ನಿಯಾದ ಮುಸಾಹಿರ ಅವರಿಗೆ ಮೂವರು ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News