ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ 'ವೀಸಾ ಆನ್ ಅರೈವಲ್' ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಯುಎಇ

Update: 2021-08-24 11:25 GMT
Photo: twitter.com/etihad

ಹೊಸದಿಲ್ಲಿ: "ವೀಸಾ ಆನ್ ಅರೈವಲ್" (ಆಗಮನದ ವೇಳೆ ನೀಡುವ ವೀಸಾ) ಸೌಲಭ್ಯವನ್ನು ಸಂಯುಕ್ತ ಅರಬ್ ಸಂಸ್ಥಾನವು ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಭಾರತದಿಂದ ಆಗಮಿಸುವ ಪ್ರಯಾಣಿಕರು ಅಥವಾ ಕಳೆದ 14 ದಿನಗಳಿಂದ ಭಾರತದಲ್ಲಿದ್ದು ನಂತರ ಸಂಯುಕ್ತ ಅರಬ್ ಸಂಸ್ಥಾನಕ್ಕೆ ವಾಪಸಾಗುವ ಪ್ರಯಾಣಿಕರಿಗೆ ಈ ವೀಸಾ ಆನ್ ಅರೈವಲ್ ಸವಲತ್ತು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿಯನ್ನು ಸಂಸ್ಥಾನದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎತಿಹಾದ್ ಏರ್‍ವೇಸ್ ಟ್ವೀಟ್ ಒಂದರಲ್ಲಿ ತಿಳಿಸಿದೆ.

ಇಂತಹುದೇ ನಿಯಮವನ್ನು  ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಅಫ್ಗಾನಿಸ್ತಾನ, ನೈಜೀರಿಯಾ, ದಕ್ಷಿಣ ಆಫ್ರಿಕಾ, ಉಗಾಂಡ ಮತ್ತು ನಮೀಬಿಯಾದಿಂದ ಆಗಮಿಸುವವರಿಗೂ ಅನ್ವಯಿಸಲಾಗಿದೆ.

ಈಗಾಗಲೇ ಇರುವ ನಿಯಮದಂತೆ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಪ್ರಯಾಣಿಸುವವರು ಆರು ಗಂಟೆಗಳಿಗಿಂತ ಹಳೆಯದಾಗಿರದ ರ್ಯಾಪಿಡ್ ಅರ್‍ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದೂ ಕಡ್ಡಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News