×
Ad

ಕೇಂದ್ರ ಸಚಿವ ನಾರಾಯಣ್ ರಾಣೆ ಊಟ ಮಾಡುತ್ತಿದ್ದಾಗ ಬಂಧಿಸಲಾಯಿತು: ಬಿಜೆಪಿ ಆರೋಪ

Update: 2021-08-24 17:54 IST

ಹೊಸದಿಲ್ಲಿ: ಕೇಂದ್ರ ಸಚಿವ ನಾರಾಯಣ್ ರಾಣೆ ಅವರು ಮಹಾರಾಷ್ಟ್ರದ ಸಂಗಮೇಶ್ವರದಲ್ಲಿ ಊಟ ಮಾಡುತ್ತಿದ್ದಾಗಲೇ ಅವರನ್ನು  ಬಂಧಿಸಲಾಗಿತ್ತು  ಎಂದು ವೀಡಿಯೊ ಬಿಡುಗಡೆ ಮಾಡಿದ ಬಿಜೆಪಿ ಆರೋಪಿಸಿದೆ.  

69ರ ವಯಸ್ಸಿನ ನಾರಾಯಣ್ ರಾಣೆ, ಪ್ಲೇಟ್ ಹಿಡಿದುಕೊಂಡು ಊಟ ಮಾಡುತ್ತಿರುವುದು, ಅವರ ಬೆಂಬಲಿಗರು ಪೊಲೀಸರನ್ನು ತಡೆಯಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿದೆ.

"ಸರ್ ಊಟ ಮಾಡುತ್ತಿದ್ದಾರೆ. ಒಂದು ನಿಮಿಷ. ಒಂದು ನಿಮಿಷ ... ನನ್ನನ್ನು ಮುಟ್ಟಬೇಡಿ’’ ಎಂದು ವ್ಯಕ್ತಿಯೊಬ್ಬರು ಹೇಳುತ್ತಿರುವುದು ಕೇಳಿಸುತ್ತಿದೆ. ಈ ವ್ಯಕ್ತಿ ರಾಣೆಯವರ ಪುತ್ರ ನಿತೇಶ್ ರಾಣೆ ಎಂದು ನಂಬಲಾಗಿದೆ.

ನಂತರ ಸಚಿವರನ್ನು ಮುಂಬೈನಿಂದ ಸುಮಾರು 300 ಕಿ.ಮೀ. ದೂರದಲ್ಲಿರುವ ಸಂಗಮೇಶ್ವರದಲ್ಲಿರುವ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News