×
Ad

ಎಲ್‌ಐಸಿಯ ‘ಆನಂದ ಮೊಬೈಲ್ ಆ್ಯಪ್’ ಲೋಕಾರ್ಪಣೆ

Update: 2021-08-26 23:42 IST

ಹೊಸದಿಲ್ಲಿ : ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ‘ಆನಂದ ಮೊಬೈಲ್ ಆ್ಯಪ್’ ಅನ್ನು ಸಂಸ್ಥೆಯ ಅಧ್ಯಕ್ಷ ಎಂ.ಆರ್. ಕುಮಾರ್ ಮಂಗಳವಾರ ಲೋಕಾರ್ಪಣೆಗೊಳಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಹೊಸ ಆ್ಯಪ್ ಅನ್ನು ಸಂಸ್ಥೆಯ ನೆರವಿನಿಂದ ಡಿಜಿಟಲ್ ವ್ಯವಸ್ಥೆಯ ಮೂಲಕ ‘ನಿಮ್ಮ ಗ್ರಾಹಕರನ್ನು ಅರಿಯಿರಿ’ (ಕೆವೈಸಿ) ಪ್ರಕ್ರಿಯೆ ನಡೆಸಲು ಇದರಿಂದ ಅನುಕೂಲವಾಗಲಿದೆ. ಎಲ್‌ಐಸಿಯ ಅಧಿಕಾರಿಗಳು ಮತ್ತು ಗ್ರಾಹಕರ ನಡುವೆ ಸುಲಲಿತವಾಗಿ ಸಂಪರ್ಕ ಸಾಧಿಸಿ, ವಹಿವಾಟು ನಡೆಸಲು, ಏಜೆಂಟ್‌ಗಳು ವಿಮಾ ಆಧಾರ್ ಆಧಾರಿತ ಇ-ದೃಢೀಕರಣ - ಆನಂದ ಪ್ರಕ್ರಿಯೆ ನಡೆಸಲೂ ಅನುಕೂಲವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಲ್‌ಐಸಿ ಅಧ್ಯಕ್ಷ ಕುಮಾರ್ ‘ಹೊಸ ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಿದ್ದು, ಸಂಸ್ಥೆಯ ಇತಿಹಾಸದಲ್ಲಿ ಪ್ರಮುಖ ರೀತಿ ಅಂಶ. ಮುಂದಿನ ದಿನಗಳಲ್ಲಿ ಹಲವು ಬದಲಾವಣೆಗಳು ಆಗಲಿವೆ. ಎಲ್‌ಐಸಿ ಅಂಥ ಪರಿಸ್ಥಿತಿಗಳಿಗೆ ಹೊಂದಿ ಕೊಂಡು ವಹಿವಾಟು ನಡೆಸಲಿದೆ’ ಎಂದರು.

ಹೊಸ ಆ್ಯಪ್‌ನಿಂದಾಗಿ ಜೀವ ವಿಮಾ ಏಜೆಂಟ್‌ಗಳು ಮತ್ತು ಅಧಿಕೃತ ಮಧ್ಯವರ್ತಿಗಳಿಗೆ ಸುಲಭವಾಗಿ ಗ್ರಾಹಕರಿಗೆ ವಿಮೆ ಮಾಡಿಸಲು ಮತ್ತು ಅದರ ಅಪ್ಡೇಟ್ ಅನ್ನು ನೀಡಲು ಸುಲಭವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಏಜೆಂಟ್‌ಗಳಿಗೆ ಮತ್ತು ಇತರರಿಗೆ ಆ್ಯಪ್ ಅನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬ ಬಗ್ಗೆ ಇ-ತರಬೇತಿ ವೀಡಿಯೊವನ್ನು ಬಿಡುಗಡೆ ಮಾಡಲಾಯಿತು. ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಕುಮಾರ್ ಗುಪ್ತಾ, ರಾಜ್‌ ಕುಮಾರ್, ಸಿದ್ದಾರ್ಥ ಮೊಹಾಂತಿ, ಮಿನಿ ಐಪೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News