ಅಫ್ಘಾನಿಸ್ತಾನದಿಂದ ತೆರವುಗೊಳಿಸಲ್ಪಟ್ಟ ಕೆಲವರಲ್ಲಿ ಕೋವಿಡ್ ಸೋಂಕು ಪತ್ತೆ
Update: 2021-08-27 00:12 IST
ಕಾಬೂಲ್, ಆ.27: ಅಫ್ಘಾನಿಸ್ತಾನದಿಂದ ತೆರವುಗೊಳಿಸಿ ಭಾರತಕ್ಕೆ ಕರೆತರಲಾದ ಕೆಲವರಲ್ಲಿ ಕೋವಿಡ್19 ಸೋಂಕು ಪತ್ತೆಯಾಗಿದ್ದು ಅವರನ್ನು ಐಸೋಲೇಶನ್ನಲ್ಲಿರಿಸಲಾಗಿದೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಸರಕಾರ ಗುರುವಾರ ತಿಳಿಸಿದೆ.
ಕೇಂದ್ರ ಗೃಹ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘‘ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ವೈಲ್ಡಣ ಪೊಲೀಯೋ ಅಸ್ತಿತ್ವದಲ್ಲಿರುವುದರಿಂದ ಅಫ್ಘಾನ್ನಿಂದ ಭಾರತಕ್ಕೆ ಆಗಮಿಸಿರುವವರೆಲ್ಲರಿಗೂ ಪೊಲಿಯೋ ನಿರೋಧಕ ಲಸಿಕೆಯನ್ನು ನೀಡಲಾಗಿದೆ ಎಂದವರು ತಿಳಿಸಿದರು. ತೆರವುಗೊಳಿಸಲ್ಪಟ್ಟವರಿಗೆ ಕೋವಿಡ್19 ತಪಾಸಣೆಗಾಗಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಏರ್ಪಾಡುಗಳನ್ನು ಮಾಡಲಾಗಿದ್ದು, ಕೆಲವರಿಗೆ ಪಾಸಿಟಿವ್ ಬಂದಿರುವುದಾಗಿ ಅವರು ತಿಳಿಸಿದರು.