ಕಾಬೂಲ್: ಕೂದಲೆಳೆಯಿಂದ ಭಾರೀ ಅಪಾಯದಿಂದ ಪಾರಾದ 160 ಅಫ್ಘಾನ್ ಸಿಖ್ಖರು; ವರದಿ

Update: 2021-08-27 06:48 GMT
ಸಾಂದರ್ಭಿಕ ಚಿತ್ರ (Photo source: twitter)

ಹೊಸದಿಲ್ಲಿ: ಕಾಬೂಲ್ ವಿಮಾನ ನಿಲ್ದಾಣದ ಬಳಿ ಗುರುವಾರ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಅಫ್ಘಾನಿಸ್ತಾನದ ಸುಮಾರು 160 ಸಿಖ್ ಹಾಗೂ  ಹಿಂದೂ ನಾಗರಿಕರು ಭಾರೀ ಅಪಾಯದಿಂದ ಪಾರಾಗಿದ್ದಾರೆ. ಅಫ್ಘಾನ್  ನ ಅಲ್ಪಸಂಖ್ಯಾತ ಸಮುದಾಯಗಳ ಈ ಸದಸ್ಯರು ಈಗ ಗುರುದ್ವಾರದೊಳಗೆ ಆಶ್ರಯ ಪಡೆದಿದ್ದಾರೆ ಎಂದು NDTV ವರದಿ ಮಾಡಿದೆ.

ಅಫ್ಘಾನಿಸ್ತಾನದ ರಾಜಧಾನಿಯ ಹಾಮೀದ್ ಕರ್ಝೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ಸ್ಫೋಟ ಸಂಭವಿಸುವ ಗಂಟೆಗಳ ಮುನ್ನ  ಸುಮಾರು 145 ಅಫಘಾನ್ ಸಿಖ್ಖರು ಹಾಗೂ  15 ಹಿಂದೂಗಳು ಸ್ಥಳದಲ್ಲಿದ್ದರು. ತಾಲಿಬಾನ್ ಕಳೆದ ವಾರ ಸ್ವಾಧೀನಪಡಿಸಿಕೊಂಡ ನಂತರ ಅವರು ದೇಶದಿಂದ ಹೊರಹೋಗಲು ಎದುರು ನೋಡುತ್ತಿದ್ದರು. ಸ್ಫೋಟದ ವೇಳೆ ಈ ಗುಂಪು ವಿಮಾನ ನಿಲ್ದಾಣದಿಂದ ವಾಪಸಾಗಿತ್ತು ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದ ಜನನಿಬಿಡ ಗೇಟ್‌ಗಳಿಗೆ ಆತ್ಮಹತ್ಯಾ ಬಾಂಬರ್‌ಗಳು ಗುರುವಾರ ಸಂಜೆ ಕನಿಷ್ಠ ಎರಡು ಸ್ಫೋಟಗಳನ್ನು ನಡೆಸಿದ್ದು, ವಿಮಾನ ನಿಲ್ದಾಣದಲ್ಲಿ ರಕ್ತದ ಕೋಡಿ ಹರಿದಿತ್ತು.

ಗುರುವಾರ ಈ ಗುಂಪು ಭಾರೀ ಅನಾಹುತದಿಂದ  ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿರಬಹುದು. ಇಂದಿನ ಕಾಬೂಲ್ ವಿಮಾನ ನಿಲ್ದಾಣ ಸ್ಫೋಟವು ಅವರು ನಿನ್ನೆ ನಿಂತಿದ್ದ ಸ್ಥಳದಲ್ಲಿಯೇ ಸಂಭವಿಸಿದೆ  ಎಂದು  ಸ್ಫೋಟದ ನಂತರದ ಚಿತ್ರಗಳನ್ನು ಪೋಸ್ಟ್ ಮಾಡಿದ ದಿಲ್ಲಿ  ಸಿಖ್ ಗುರುದ್ವಾರಾ ಮ್ಯಾನೇಜ್‌ಮೆಂಟ್ ಕಮಿಟಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News