ವಿದೇಶಿ ಪಡೆಗಳ ವಾಪಾಸ್ಸಾತಿ ಬೆನ್ನಲ್ಲೇ ಸಂಪುಟ ರಚನೆಗೆ ಸಜ್ಜಾದ ತಾಲಿಬಾನ್

Update: 2021-08-29 04:16 GMT
ತಾಲಿಬಾನ್‌ನ ಮುಖ್ಯ ವಕ್ತಾರ ಝಬೀವುಲ್ಲಾ ಮುಜಾಹಿದ್ (Photo credit: PTI)

ಕಾಬೂಲ್, ಆ.29: ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ಅಮೆರಿಕ ಹೊರತುಪಡಿಸಿ ಉಳಿದೆಲ್ಲ ದೇಶಗಳು ತಮ್ಮ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಿವೆ. ಉಗ್ರರ ದಾಳಿಯ ಭೀತಿಯ ನಡುವೆಯೇ ಬುಧವಾರ ಮುಂಜಾನೆಯ ಒಳಗಾಗಿ ತನ್ನೆಲ್ಲ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕ ಕೂಡಾ ನಿರ್ಧರಿಸಿದೆ. ಈ ನಡುವೆ ದೇಶದ ಆಡಳಿತ ಸೂತ್ರ ಹಿಡಿಯಲು ಹೊಸ ಸಚಿವ ಸಂಪುಟವನ್ನು ಅಂತಿಮಪಡಿಸಲಾಗುತ್ತಿದ್ದು, ಇಷ್ಟರಲ್ಲೇ ಸಂಪುಟವನ್ನು ಪ್ರಕಟಿಸಲಾಗುವುದು ಎಂದು ತಾಲಿಬಾನ್ ಘೋಷಿಸಿದೆ.

ಹೊಸ ಸಂಪುಟವನ್ನು ಯಾವಾಗ ಪ್ರಕಟಿಸಲಾಗುತ್ತಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ; ತಾಲಿಬಾನ್ ಯಾವಾಗ ಸಚಿವ ಸಂಪುಟ ಘೋಷಿಸುತ್ತದೆ ಎಂಬ ಬಗ್ಗೆ ಪರಸ್ಪರ ವೈರುಧ್ಯದ ವರದಿಗಳು ಪ್ರಕಟವಾಗುತ್ತಿವೆ.

ತಾಲಿಬಾನ್‌ನ ಮುಖ್ಯ ವಕ್ತಾರ ಝಬೀವುಲ್ಲಾ ಮುಜಾಹಿದ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ರಾಯ್ಟರ್ಸ್‌ ಸುದ್ದಿಸಂಸ್ಥೆ ಮೊದಲು ವರದಿ ಮಾಡಿದಂತೆ, ಮುಂದಿನ ವಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ಆದರೆ ಬಳಿಕ ಧ್ವನಿ ಸಂದೇಶದಲ್ಲಿ ವಕ್ತಾರರು ಸ್ಪಷ್ಟನೆ ನೀಡಿ, ತಾಲಿಬಾನ್ ಸಂಘಟನೆ ಹೊಸ ಸಂಪುಟವನ್ನು ಒಂದೆರಡು ವಾರಗಳಲ್ಲಿ ದೃಢಪಡಿಸಲಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News