×
Ad

ಪ್ಯಾರಾಲಿಂಪಿಕ್ಸ್: ಹೈಜಂಪ್ ನಲ್ಲಿ ಬೆಳ್ಳಿ ಜಯಿಸಿದ ನಿಶಾದ್ ಕುಮಾರ್

Update: 2021-08-29 17:33 IST
photo: twitter 

ಟೋಕಿಯೊ: ಭಾರತದ ಹೈಜಂಪ್ ಪಟು ನಿಶಾದ್ ಕುಮಾರ್ ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಹೈಜಂಪ್ ಟಿ 47 ಸ್ಪರ್ಧೆಯಲ್ಲಿ 2.06 ಮೀ.ಎತ್ತರಕ್ಕೆ ಜಿಗಿದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

2.06 ಮೀ.ಎತ್ತರಕ್ಕೆ ಹಾರಿದ ನಿಶಾದ್ ಕುಮಾರ್ 2021ರಲ್ಲಿ ತಾನೇ ನಿರ್ಮಿಸಿದ್ದ ಏಶ್ಯನ್ ದಾಖಲೆಯನ್ನು ಸರಿಗಟ್ಟಿದರು.

ಇದಕ್ಕೂ ಮೊದಲು ನಡೆದ ಮಹಿಳೆಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭವಿನಾಬೆನ್ ಪಟೇಲ್ ಭಾರತಕ್ಕೆ ಪ್ರಸಕ್ತ ಕ್ರೀಡಾಕೂಟದಲ್ಲಿ ಮೊದಲ ಪದಕ ಗೆದ್ದುಕೊಟ್ಟಿದ್ದರು. ಇದೀಗ ನಿಶಾದ್ ಕುಮಾರ್ ಭಾರತದ ಪದಕದ ಖಾತೆಗೆ ಎರಡನೇ ಪದಕ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News