ಸೆ.5ರಂದು ತುಳು ಅಕಾಡಮಿ ಸಹಕಾರದಲ್ಲಿ ನಟನಾ ತರಗತಿ ಉದ್ಘಾಟನೆ

Update: 2021-08-31 08:13 GMT

ಮಂಗಳೂರು, ಆ.31: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಭಾಗಿತ್ವದಲ್ಲಿ ಲೆನ್ಸ್ ಕ್ಯಾಪ್ ಪಿಕ್ಚರ್ಸ್ ನಡೆಸುವ ತುಳು ಹಾಗೂ ಕನ್ನಡ ಚಲನಚಿತ್ರ ನಟನಾ ತರಗತಿ ಸೆ.5ರಂದು ಬೆಳಗ್ಗೆ 10:30ಕ್ಕೆ ತುಳು ಭವನದಲ್ಲಿ ಉದ್ಘಾಟನೆಗೊಳ್ಳಲಿದೆ.

ಸುದ್ದಿಗೋಷ್ಟಿಯಲ್ಲಿಂದು ಈ ವಿಷಯ ತಿಳಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ತುಳು ಹಾಗೂ ಕನ್ನಡ ಭಾಷೆಯಲ್ಲಿ ಈ ನಟನಾ ತರಗತಿ ನಡೆಯಲಿದ್ದು ತುಳುವಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

ಮೂರು ತಿಂಗಳ ಕಾಲ ಶನಿವಾರ ಹಾಗೂ ರವಿವಾರ ಈ ತರಬೇತಿ ನಡೆಯಲಿದೆ. ಈಗಾಗಲೇ 20 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಯಾವುದೇ ವಯೋಮಾನದ ನಟನಾ ಪ್ರತಿಭೆಗಳನ್ನು ವೇದಿಕೆಗೆ ತರುವ ನಿಟ್ಟಿನಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಶನಿವಾರ ಅಪರಾಹ್ನ 2ರಿಂದ 5ರವರೆಗೆ ರವಿವಾರದಂದು ಬೆಳಗ್ಗೆ 9ರಿಂದ 12ರವರೆಗೆ ತರಬೇತಿ ನಡೆಯಲಿದೆ. ನೀನಾಸಂನ ಕಲಾವಿದ ವಿದು ಉಚ್ಚಿಲ್ ಪ್ರಮುಖ ತರಬೇತುದಾರರಾಗಿದ್ದು, ಸ್ಯಾಂಡಲ್‌ವುಡ್‌ನ ನಟರು ಕೂಡಾ ತರಬೇತಿಯಲ್ಲಿ ಭಾಗವಹಿಲಿದ್ದಾರೆ.

ಸಮಾರೋಪ ಸಾರಂಭದಲ್ಲಿ ಉಮಾಶ್ರೀ ಹಾಗೂ ಜಗ್ಗೇಶ್ ಭಾಗವಹಿಸಲಿದ್ದಾರೆ ಎಂದು ಲೆನ್ಸ್ ಕ್ಯಾಪ್ ಪಿಕ್ಚರ್ಸ್‌ನ ಗೌತಮ್ ಮೋಹನ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮೋಹನ್ ಕೊಪ್ಪಳ, ರೋಹಿತ್ ಉಳ್ಳಾಲ, ಮೇಘನಾ ಅತ್ತಾವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News