ಕೊಚ್ಚಿ: ಗೇರು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮುಖ್ಯ ಸಲಹೆಗಾರರಾಗಿ ಡಾ.ಎಂ.ಗಂಗಾಧರ ನಾಯಕ್ ನೇಮಕ

Update: 2021-08-31 11:19 GMT

ಪುತ್ತೂರು, ಆ.31: ಪುತ್ತೂರಿನಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ಪ್ರಧಾನ ವಿಜ್ಞಾನಿ ಹಾಗೂ ನಿರ್ದೇಶಕರಾಗಿದ್ದ ಡಾ.ಎಂ.ಗಂಗಾಧರ ನಾಯಕ್ ಕೇರಳದ ಕೊಚ್ಚಿಯಲ್ಲಿರುವ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯದಲ್ಲಿ ಗೇರು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕಳೆದ ಹಲವಾರು ವರ್ಷಗಳಿಂದ ಹಿರಿಯ ವಿಜ್ಞಾನಿಯಾಗಿ, ನಿರ್ದೇಶಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಎಂ.ಗಂಗಾಧರ ನಾಯಕ್ ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿದ್ದರು. ಅವರ ಸೇವಾ ಹಿರಿತನ, ಗೇರು ಬೆಳೆಗಳ ಅನುಭವಗಳ ಆಧಾರದಲ್ಲಿ ಕೊಚ್ಚಿ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ್ ಎನ್. ಹುಬ್ಬಳ್ಳಿ ಅವರ ಶಿಫಾರಸಿನೊಂದಿಗೆ ಗೇರು ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯ ಸಲಹೆಗಾರರಾಗಿ ಇಲಾಖೆ ನೇಮಕಗೊಳಿಸಿದೆ.

ಕೊಚ್ಚಿಯಲ್ಲಿರುವ ಗೇರು ಮತ್ತು ಕೊಕ್ಕೋ ಅಭಿವೃದ್ಧಿ ನಿರ್ದೇಶನಾಲಯದ ಮೂಲಕ ಈ ಬೆಳಗೆಗಳ ಅಭಿವೃದ್ಧಿ ಬಗ್ಗೆ ಮಾಹಿತಿ, ಪ್ರೋತ್ಸಾಹ, ಸಹಾಯಧನ, ತಾಂತ್ರಿಕ ಸಲಹೆ, ಫಲಾನುಭವಿಗಳ ಗುರುತಿಸುವಿಕೆ, ಪ್ರಾತ್ಯಕ್ಷಿಕೆ, ಕಾರ್ಯಾಗಾರ, ಸೆಮಿನಾರ್ ಮುಂತಾದ ಚಟುವಟಿಕೆಗಳು ದೇಶವ್ಯಾಪಿ ನಡೆಯುತ್ತಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News