ನೆರೆ ಪೀಡಿತ ಅಸ್ಸಾಂ ಮೇಲೆ ನಿಗಾ, ಎನ್ಡಿಆರ್ಎಫ್ ತಂಡ ನಿಯೋಜನೆ: ಕೇಂದ್ರ ಗೃಹ ಸಚಿವಾಲಯ

Update: 2021-08-31 17:55 GMT

ಹೊಸದಿಲ್ಲಿ, ಆ. 31: ಇದುವರೆಗೆ ಇಬ್ಬರು ಮಕ್ಕಳು ಮೃತಪಟ್ಟ ಹಾಗೂ 3.63 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರಾದ ಅಸ್ಸಾಂನ ನೆರೆ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವಾಲಯ ನಿಗಾ ಇರಿಸಿದೆ. ‘‘ಅಸ್ಸಾಂನ ನೆರೆ ಪರಿಸ್ಥಿತಿ ಮೇಲೆ ಕೇಂದ್ರ ಗೃಹ ಸಚಿವಾಲಯ ನಿಗಾ ಇರಿಸಿದೆ. ‌

ರಾಜ್ಯದಲ್ಲಿ ರವಿವಾರ ರಾಷ್ಟ್ರಿಯ ವಿಪತ್ತು ಪ್ರತಿಸ್ಪಂದನಾ ಪಡೆ (ಎನ್ಡಿಆರ್ಎಫ್) ತಂಡವನ್ನು ನಿಯೋಜಿಸಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಕರೆ ಮಾಡಿ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ ಹಾಗೂ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. 

ಬಾಪೇಟ ಜಿಲ್ಲೆಯ ಚೆಂಗದಲ್ಲಿ ಹಾಗೂ ಮೊರಿಗಾಂವ್ನ ಮಯೋಂಗ್ನಲ್ಲಿ ಇಬ್ಬರು ಮಕ್ಕಳು ಸೋಮವಾರ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ನೆರೆ ವರದಿ ಹಾಗೂ ಮಾಹಿತಿ ನಿರ್ವಹಣಾ ವ್ಯವಸ್ಥೆ (ಎಫ್ಆರ್ಐಎಂಎಸ್) ತಿಳಿಸಿದೆ. ನೆರೆಯಿಂದಾಗಿ ಒಟ್ಟು 3,63,135 ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಎಫ್ಆರ್ಐಎಂಎಸ್ನ ಬುಲೆಟಿನ್ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News