ಬಲಗೈ ಸಮುದಾಯದವರು ಸಚಿವರಾಗಲಿ

Update: 2021-09-01 17:57 GMT

ಮಾನ್ಯರೇ,

ಆದಿಕರ್ನಾಟಕ/ಬಲಗೈ ರಾಜ್ಯದಲ್ಲಿ ಸರಿ ಸುಮಾರು 45-50 ಲಕ್ಷ ಜನಸಂಖ್ಯೆ ಇರುವ ಒಂದು ದೊಡ್ಡ ಪ್ರಬಲ ಸಮುದಾಯ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದ ಸಮ್ಮಿಶ್ರ ಸರಕಾರದಲ್ಲಿ ತಮ್ಮ ಕ್ಯಾಬಿನೆಟ್‌ನಲ್ಲಿ ಬಲಗೈ ಜನಾಂಗಕ್ಕೆ ಸಚಿವ ಸ್ಥಾನ ನೀಡಿ ಸಾಮಾಜಿಕ ನ್ಯಾಯ ಹಾಗೂ ಪ್ರಾತಿನಿಧ್ಯ ಕೊಟ್ಟಿದ್ದರು. ಆದರೆ, ನಂತರ ಬಂದ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಹಾಗೂ ಈಗಿನ ಬಸವರಾಜ ಬೊಮ್ಮಾಯಿ ಸರಕಾರದಿಂದ ಕೂಡ ಈ ಸಮುದಾಯದವರನ್ನು ಕಡೆಗಣಿಸಲಾಗುತ್ತಿದೆ. ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಾದವರು ಪ್ರತಿಯೊಂದು ವರ್ಗ ಹಾಗೂ ಪ್ರಾಂತವನ್ನೂ ಪರಿಗಣಿಸಬೇಕು. ಇಲ್ಲದಿದ್ದರೆ ಸಮಾಜಕ್ಕೆ, ಸಮುದಾಯಕ್ಕೆ ತಪ್ಪುಸಂದೇಶ ರವಾನೆಯಾಗುತ್ತದೆ. ಕೆಲವು ಪ್ರಬಲ ರಾಜಕಾರಣಿಗಳ ಪರವಾಗಿ ವಕಾಲತ್ತು ವಹಿಸುವ ಬಿಜೆಪಿ ನಾಯಕರು ಬಲಗೈ ಜನಾಂಗಕ್ಕೆ ಇನ್ನೂ ಸಚಿವ ಸ್ಥಾನ ನೀಡಲು ಮುಂದಾಗದಿರುವುದು ಬೇಸರದ ಸಂಗತಿ. ಇನ್ನಾದರೂ ಬಲಗೈ ಜನಾಂಗಕ್ಕೆ ಸಚಿವ ಸ್ಥಾನ ಸಿಗಲಿ. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಈ ಸಮುದಾಯದ ಮತದಾರರು ಈ ವಿಷಯವನ್ನು ಗಣನೆಗೆ ತೆಗೆದುಕೊಳ್ಳುವುದು ಖಂಡಿತ.

Writer - -ಅನಿಲ್ ಕುಮಾರ್, ನಂಜನಗೂಡು

contributor

Editor - -ಅನಿಲ್ ಕುಮಾರ್, ನಂಜನಗೂಡು

contributor

Similar News