ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಎಡ್ಮೇರುಕೆರೆ ಅಭಿವೃದ್ಧಿ

Update: 2021-09-02 13:27 GMT

ಶಿರ್ವ, ಸೆ.2: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಉಡುಪಿ ತಾಲೂಕು ಹಾಗೂ ಬೆಳ್ಳೆ ಗ್ರಾಮ ಪಂಚಾಯತ್, ಎಡ್ಮೇರು ಕೆರೆ ಅಭಿವೃದ್ಧಿ ಸಮಿತಿ, ಲಯನ್ಸ್ ಕ್ಲಬ್ ಮೂಡುಬೆಳ್ಳೆ ಸಹಬಾಗಿತ್ವದಲ್ಲಿ ಹೂಳೆತ್ತಿ ದುರಸ್ಥಿಗೊಂಡ ಎಡ್ಮೇರು ಕರೆಯ ಹಸ್ತಾಂತರ ಮತ್ತು ಕೆರೆದಂಡೆಯಲ್ಲಿ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

 ನಂತರ ನಾಲ್ಕುಬೀದಿ ಸನ್‌ಶೈನ್ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ಗಣೇಶ್ ಬಿ. ಮಾತನಾಡಿ, ನೀರು ಬದುಕಿನ ಜೀವನಾಡಿಯಾಗಿದ್ದು, ಅದರ ಸಂರಕ್ಷಣೆ ಸಮಸ್ತ ನಾಗರಿಕರ ಜವಾಬ್ದಾರಿಯಾಗಿದೆ. ನಮ್ಮ ಊರು ನಮ್ಮ ಕೆರೆಯೋಜನೆಯಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 2ಲಕ್ಷ 37ಸಾವಿರ ರೂ. ಹಾಗೂ ಸ್ಥಳೀಯ ಸಂಪನ್ಮೂಲದ ಸಹಭಾಗಿತ್ವದಲ್ಲಿ ಈ ಕೆರೆಯ ದುರಸ್ಥಿ ನಡೆದಿದೆ. ಯೋಜನೆಯ 290ನೇ ಕೆರೆಯಾಗಿ ಎಡ್ಮೇರು ಕೆರೆಯು ಅಭಿವೃದ್ಧಿಗೊಂಡಿದೆ ಎಂದರು.

ಕಾಪು ತಾಪಂ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಗಾಂವ್ಕರ್, ಜನಜಾಗೃತಿ ಯೋಜನೆಯ ನಿಕಟಪೂರ್ವ ಅಧ್ಯಕ್ಷ ಕಟ್ಟಿಂಗೆರಿ ದೇವದಾಸ್ ಹೆಬ್ಬಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆರೆದಂಡೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಹಸುರೀಕರಣಕ್ಕೆ ಚಾಲನೆ ನೀಡಲಾಯಿತು.

ಬೆಳ್ಳೆ ಗ್ರಾಪಂ ವಾರ್ಡ್ ಸದಸ್ಯ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುರುರಾಜ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಅಧ್ಯಕ್ಷ ವಲೇರಿಯನ್ ನೊರೋನ್ನ, ತಾಪಂ ಮಾಜಿ ಸದಸ್ಯೆ ಸುಜಾತ ಸುವರ್ಣ, ಪ್ರಗತಿಬಂಧು ಸ್ವಸಹಾಯ ಸಂಘದ ವಲಯಾಧ್ಯಕ್ಷ ರಾಘವೇಂದ್ರ ಶೆಟ್ಟಿ, ಬೆಳ್ಳೆ ಗ್ರಾಪಂ ಉಪಾಧ್ಯಕ್ಷೆ ಸಂಧ್ಯಾ ಎಂ.ಶೆಟ್ಟಿ, ಉದ್ಯಮಿ ಸಂದೀಪ್ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಪಿಡಿಒ ವಸಂತಿ ಬಾ, ಮೇರಿ ಡಿಸೋಜ, ಸೀತಾರಾಮ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ತಾಲೂಕು ಯೋಜನಾಧಿಕಾರಿ ರೋಹಿತ್ ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿರ್ವ ವಲಯ ಮೇಲ್ವಿಚಾರಕಿ ಪಲ್ಲವಿ ಶೆಟ್ಟಿ ವಂದಿಸಿದರು. ಮೇಲ್ವಿಚಾರಕ ಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News