ಕೇಂದ್ರವು ನಗದೀಕರಣ ನೀತಿಯ ಹೆಸರಿನಲ್ಲಿ ಸರಕಾರಿ ಸ್ವತ್ತುಗಳನ್ನು ಮಾರಾಟ ಮಾಡುತ್ತಿದೆ: ಪಿ.ಚಿದಂಬರಂ ಆರೋಪ

Update: 2021-09-03 08:15 GMT

ಮುಂಬೈ: ಕೇಂದ್ರ ಸರಕಾರದ ನಗದೀಕರಣ ಪೈಪ್‌ಲೈನ್ ಯೋಜನೆ ಕುರಿತು ಕೇಂದ್ರದ ವಿರುದ್ಧ ಶುಕ್ರವಾರ ಕಿಡಿಕಾರಿದ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಸರಕಾರವು ತನ್ನ ಆಸ್ತಿಯನ್ನು ನಗದೀಕರಣ ನೀತಿಯ ಹೆಸರಿನಲ್ಲಿ ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ಆರೋಪಿಸಿದರು.

ಮುಂಬೈನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚಿದಂಬರಂ "ಕಳೆದ 70 ವರ್ಷಗಳಲ್ಲಿ ನಿರ್ಮಿಸಲಾಗಿರುವ ಎಲ್ಲವನ್ನೂ ಆಯ್ದ ಕೆಲವರ ಕೈಗೆ ಒತ್ತೆ ಇಡಲಾಗಿದೆ. ಜನರು ಈ ಅಪಾಯದ ಬಗ್ಗೆ ತಿಳಿದುಕೊಂಡಿರಬೇಕು ಹಾಗೂ  ಅದರ ವಿರುದ್ಧ ಪ್ರತಿಭಟಿಸಬೇಕು'' ಎಂದರು.

"ಅರ್ಥಶಾಸ್ತ್ರದಲ್ಲಿ ಸ್ವತ್ತು ಬೇರ್ಪಡಿಸುವಿಕೆ ಎಂಬ ಪರಿಕಲ್ಪನೆ ಇದೆ. ಅದೇ ಇಲ್ಲಿ ನಡೆಯುತ್ತಿದೆ. ಈ ನೀತಿಯ ಬಗ್ಗೆ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ. ಸಂಸತ್ತಿನಲ್ಲಿ ಯಾವುದೇ ಚರ್ಚೆಯೂ  ನಡೆಯಲಿಲ್ಲ. ಈ ವಿಷಯದ ಬಗ್ಗೆ ಚರ್ಚೆಗೆ ಸರಕಾರ ಎಂದಿಗೂ ಅವಕಾಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಹಾಗೂ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸುವುದಿಲ್ಲ ಎಂದು ಚಿದಂಬರಂ ಹೇಳಿದರು.

ಕಳೆದ ತಿಂಗಳು ಕೇಂದ್ರವು ಅಂದಾಜು 6 ಲಕ್ಷ ಕೋಟಿ ರೂ. ಮೌಲ್ಯದ ನಾಲ್ಕು ವರ್ಷಗಳ ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (ಎನ್ ಎಂಪಿ) ಅನ್ನು ಬಿಡುಗಡೆ ಮಾಡಿತು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News