ಅಫ್ಘಾನಿಸ್ತಾನದ ಹೊಸ ಸರಕಾರದ ನೇತೃತ್ವ ವಹಿಸಲಿರುವ ಮುಲ್ಲಾ ಬರಾದಾರ್: ವರದಿ
Update: 2021-09-03 14:01 IST
ಕಾಬೂಲ್: ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಬರಾದರ್ ಹೊಸ ಅಫ್ಘಾನ್ ಸರಕಾರವನ್ನು ಮುನ್ನಡೆಸಲಿದ್ದಾರೆ, ಅದನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಾಲಿಬಾನ್ ಮೂಲಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.
"ಎಲ್ಲಾ ಉನ್ನತ ನಾಯಕರು ಕಾಬೂಲ್ ಗೆ ಬಂದಿದ್ದಾರೆ. ಅಲ್ಲಿ ಹೊಸ ಸರಕಾರವನ್ನು ಘೋಷಿಸಲು ಸಿದ್ಧತೆಗಳು ಅಂತಿಮ ಹಂತದಲ್ಲಿದೆ" ಎಂದು ಹೆಸರು ಹೇಳಲಿಚ್ಛಿಸದ ಓರ್ವ ತಾಲಿಬಾನ್ ಅಧಿಕಾರಿಯು 'ರಾಯಿಟರ್ಸ್' ಗೆ ತಿಳಿಸಿದರು.