×
Ad

ಮೋದಿ ಸರಕಾರ ಉದ್ಯೋಗಕ್ಕೆ ಹಾನಿಕಾರಕ: ರಾಹುಲ್ ಗಾಂಧಿ ವಾಗ್ದಾಳಿ

Update: 2021-09-03 14:03 IST

ಹೊಸದಿಲ್ಲಿ: ಜುಲೈಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ 15 ಲಕ್ಷ ಕಡಿಮೆ ಉದ್ಯೋಗಾವಕಾಶಗಳಿವೆ ಎಂಬ ವರದಿಯನ್ನು  ಉಲ್ಲೇಖಿಸಿರುವ  ರಾಹುಲ್ ಗಾಂಧಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ  ಅವರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ರಾಷ್ಟ್ರೀಯ ಹಣ ಗಳಿಕೆಯ ಪೈಪ್‌ಲೈನ್ ಸೇರಿದಂತೆ ಮೋದಿ ಸರಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ಟೀಕಿಸಿದ ಕಾಂಗ್ರೆಸ್ ಸಂಸದರು, ಮೋದಿ ಸರಕಾರವು "ಉದ್ಯೋಗಕ್ಕೆ ಹಾನಿಕಾರಕ" ಎಂದು ಘೋಷಿಸಿದರು.

ಮೋದಿ ಸರಕಾರವು ಉದ್ಯೋಗಕ್ಕೆ ಹಾನಿಕಾರಕ. ಈ ಸರಕಾರವು ತನ್ನ ಸ್ನೇಹಿತರಿಗೆ ಸಂಬಂಧವಿರದ ಯಾವುದೇ ವ್ಯಾಪಾರ ಅಥವಾ ಉದ್ಯೋಗವನ್ನು ಉತ್ತೇಜಿಸುವ ಅಥವಾ ಬೆಂಬಲಿಸುವ ಕೆಲಸ ಮಾಡುವುದಿಲ್ಲ… ಇದರ ಬದಲಿಗೆ ಈ ಸರಕಾರವು ಇದ್ದ ಉದ್ಯೋಗವನ್ನು ಕಸಿದುಕೊಳ್ಳುತ್ತಿದೆ. ತೋರಿಕೆಗಾಗಿ ಸರಕಾರ ದೇಶದ ಜನರಿಂದ ಸ್ವಾಭಿಮಾನವನ್ನು ನಿರೀಕ್ಷಿಸುತ್ತಿದೆ'' ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News