ಪ್ಯಾರಾಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಿ ಶೂಟರ್ ಅವನಿ ಲೇಖರ

Update: 2021-09-04 15:39 GMT
photo: Twitter

ಟೋಕಿಯೊ: ರವಿವಾರ ನಡೆಯುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಸಮಾರೋಪ ಸಮಾರಂಭದ ಪಥ ಸಂಚಲನದಲ್ಲಿ ಭಾರತದ ಶೂಟರ್ ಅವನಿ ಲೇಖರ ದೇಶದ ಧ್ವಜವನ್ನು ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ.

19 ವರ್ಷದ  ಲೇಖರ ಸೋಮವಾರ 50 ಮೀಟರ್ ರೈಫಲ್ 3 ಪೊಸಿಶನ್ ಎಸ್‌ಎಚ್ 1 ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೊದಲು ಸೋಮವಾರ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. ಒಂದೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ನಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು.

"ಅವನಿ ಧ್ವಜಧಾರಿಯಾಗಲಿದ್ದು, ಸಮಾರೋಪ ಸಮಾರಂಭದಲ್ಲಿ ಭಾರತೀಯ ತಂಡದಿಂದ 11 ಮಂದಿ ಭಾಗವಹಿಸಲಿದ್ದಾರೆ" ಎಂದು ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ (ಪಿಸಿಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News