ಪೊಲಿಪು ಮಸೀದಿಯಲ್ಲಿ ಕೊರೋನ ಲಸಿಕಾ ಶಿಬಿರ

Update: 2021-09-05 14:58 GMT

ಕಾಪು, ಸೆ.5: ಪೊಲಿಪು ಜಾಮಿಯಾ ಮಸೀದಿ ಹಾಲ್ನಲ್ಲಿ ಕೋವಿಡ್ 19 ಅಭಿಯಾನದ ಅಂಗವಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗ ದೊಂದಿಗೆ ಕೊರೋನ ಲಸಿಕಾ ಶಿಬಿವನ್ನು ಶನಿವಾರ ಆಯೋಜಿಸಲಾಗಿತ್ತು.

ಕಾಪು ಖಾಝಿ ಅಲ್ಹಾಜ್ ಪಿ.ಬಿ.ಅಹಮದ್ ಮುಸ್ಲಿಯಾರ್ ಮೊದಲ ಲಸಿಕೆ ಪಡೆದು ಶಿಬಿರಕ್ಕೆ ಚಾಲನೆ ನೀಡಿದರು. ಮಸೀದಿ ಅಧ್ಯಕ್ಷ ಎಚ್.ಅಬ್ದುಲ್ಲಾ, ಉಪಾಧ್ಯಕ್ಷ ರಜಬ್ ಹಾಜಿ ಮೊಯ್ದಿನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್, ಕೋಶಾಧಿಕಾರಿ ಹಾಜಿ ಕೆ.ಮೊಯ್ದಿನ್ ಗುಡ್‌ವಿಲ್, ಖತೀಬ್ ಮುಹಮ್ಮದ್ ಇರ್ಷಾದ್ ಸಅದಿ, ವೈದ್ಯಾಧಿಕಾರಿ ಡಾ.ಸುಬ್ರಾಯ ಕಾಮತ್, ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ಪ್ರಾಥಮಿಕ ಆರೋಗ್ಯಾಧಿಕಾರಿ ಮಮತ, ವಿದ್ಯಾ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕೋವಿಶೀಲ್ಡ್ 500 ಡೋಸ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಡೋಸ್ ಮತ್ತು 84 ದಿವಸ ಕಳೆದವರಿಗೆ ದ್ವಿತೀಯ ಡೋಸ್ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News