ವೈರಲ್ ಜ್ವರದಿಂದಾಗಿ 170ಕ್ಕೂ ಅಧಿಕ ಮಕ್ಕಳು ಪ್ರಯಾಗರಾಜ್ ನ ಆಸ್ಪತ್ರೆಗೆ ದಾಖಲು

Update: 2021-09-05 15:32 GMT

ಸಾಂದರ್ಭಿಕ ಚಿತ್ರ

ಪ್ರಯಾಗರಾಜ್(ಉ.ಪ್ರ),ಸೆ.5: ಮಿದುಳಿನ ಉರಿಯೂತ ಮತ್ತು ನ್ಯುಮೋನಿಯಾದಂತಹ ದೀರ್ಘಕಾಲಿಕ ಕಾಯಿಲೆಗಳು ಮತ್ತು ವೈರಲ್ ಜ್ವರದಿಂದ ಬಳಲುತ್ತಿದ್ದು,ಆಮ್ಲಜನಕ ಬೆಂಬಲ ಅಗತ್ಯವಾಗಿರುವ 170ಕ್ಕೂ ಅಧಿಕ ಮಕ್ಕಳನ್ನು ಇಲ್ಲಿಯ ಮೋತಿಲಾಲ ನೆಹರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಯಾಗರಾಜ್ ಮುಖ್ಯ ವೈದ್ಯಾಧಿಕಾರಿ ಡಾ.ನಾನಕ್ ಸರನ್ ಅವರು ರವಿವಾರ ಇಲ್ಲಿ ತಿಳಿಸಿದರು.

ಕೆಲವು ದಿನಗಳ ಹಿಂದೆ ತಾನು ಮಕ್ಕಳ ವಾರ್ಡ್ನ ತಪಾಸಣೆ ನಡೆಸಿದ್ದಾಗ 120 ಹಾಸಿಗೆಗಳಿದ್ದವು. ಈಗ 171 ಮಕ್ಕಳು ದಾಖಲಾಗಿದ್ದು,ಒಂದು ಹಾಸಿಗೆಯಲ್ಲಿ 2-3 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಡೆಂಗ್ಯೂ ಪ್ರಕರಣಗಳು ಕಡಿಮೆಯಿವೆ ಎಂದ ಅವರು,200 ಹಾಸಿಗೆಗಳ ವಾರ್ಡ್ ನಿರ್ಮಾಣ ಹಂತದಲ್ಲಿದೆ. ಮಕ್ಕಳಿಗೆ ಸಾಧ್ಯವಿರುವ ಎಲ್ಲ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದರು.

ನೆರೆಪೀಡಿತ ಪ್ರದೇಶಗಳಲ್ಲಿ ನೆರೆಯ ನೀರು ಕಡಿಮೆಯಾಗುತ್ತಿದ್ದು,ಮಕ್ಕಳಲ್ಲಿ ದೀರ್ಘಕಾಲಿಕ ರೋಗಗಳು ಮತ್ತು ವೈರಲ್ ಜ್ವರದ ಪ್ರಕರಣಗಳು ಹೆಚ್ಚುತ್ತಿವೆ.

ಅಂದ ಹಾಗೆ ಮೋತಿಲಾಲ್ ನೆಹರು ಆಸ್ಪತ್ರೆಯಲ್ಲಿ ಒಂದು ಹಾಸಿಗೆಯಲ್ಲಿ 3-4 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ನೆಲದಲ್ಲಿ ಚಾಪೆಯ ಮೇಲೆ ಮಲಗಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News