ನಶಾಮುಕ್ತ ಉಡುಪಿ ಅಭಿಯಾನ: ಆನ್‌ಲೈನ್‌ನಲ್ಲಿ ಭಾಷಣ ಸ್ಪರ್ಧೆ

Update: 2021-09-07 14:40 GMT

ಮಣಿಪಾಲ, ಸೆ.7: ಮಣಿಪಾಲದ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ವತಿಯಿಂದ ನಶಾಮುಕ್ತ ಉಡುಪಿ ಅಭಿಯಾನವನ್ನು ಆಯೋಜಿಸಲಾಗುತ್ತಿದ್ದು, ಇದರ ಅಂಗವಾಗಿ ಆನ್‌ಲೈನ್ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.

ಮಾಹೆಯ ಯುವ ವಿದ್ಯಾರ್ಥಿ ನಾಯಕರು ನಡೆಸುವ ನಶಾಮುಕ್ತ ಉಡುಪಿ ಅಭಿಯಾನದ ಅಂಗವಾಗಿ ಆನ್‌ಲೈನ್ ಭಾಷಣ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ನಡೆಸಲಾಗುತ್ತದೆ. 1.ಎಂಟನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳಿಗಾಗಿ, ವಿಷಯ: ಉಡುಪಿಯನ್ನು ನಶಾ ಮುಕ್ತಗೊಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ, 2. ಶಿಕ್ಷಕರಿಗಾಗಿ, ವಿಷಯ: ಉಡುಪಿಯನ್ನು ನಶಾ ಮುಕ್ತ ಗೊಳಿಸುವಲ್ಲಿ ಶಿಕ್ಷಕರ ಪಾತ್ರ ಹಾಗೂ 3.ಉಡುಪಿಯ ನಾಗರಿಕರಿಗಾಗಿ, ವಿಷಯ: ಉಡುಪಿಯನ್ನು ನಶಾ ಮುಕ್ತಗೊಳಿಸುವಲ್ಲಿ ನಾಗರಿಕರ ಪಾತ್ರ.

ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಈ ಭಾಷಣ ಸ್ಪರ್ಧೆಯನ್ನು ನಡೆಸ ಲಾಗುತ್ತದೆ. ಉಡುಪಿ ಜಿಲ್ಲೆಯ ಎಲ್ಲಾ ನಾಗರಿಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೊಂದಾವಣಿಗೆ ಸೆ.15 ಕೊನೆಯ ದಿನವಾಗಿರುತ್ತದೆ. ಭಾಷಣ ಸ್ಪರ್ಧೆಯನ್ನು ಝೂಮ್ ಆ್ಯಪ್ ಮೂಲಕ ಸೆ.23ರಿಂದ 25ರವರೆಗೆ ನಡೆಸಲಾಗುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ:0820-2922035, 6364919429 ಅಥವಾ ಈಮೈಲ್-dsa.mahe@manipal.edu- ಸಂಪರ್ಕಿಸುವಂತೆ ಮಾಹೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News