ಲಾಕ್‍ಡೌನ್ ಸಂದರ್ಭ ಭಟ್ಕಳ ಮುಸ್ಲಿಮ್ ಯೂತ್ ಫೆಡರೇಷನ್ ಅವಿಸ್ಮರಣೀಯ ಸೇವೆ: ತಂಝೀಮ್ ಸಂಸ್ಥೆಯಿಂದ ಅಭಿನಂದನಾ ಕಾರ್ಯಕ್ರಮ

Update: 2021-09-07 17:01 GMT

ಭಟ್ಕಳ: ಕೋವಿಡ್-19  ಲಾಕ್‍ಡೌನ್ ಸಂದರ್ಭದಲ್ಲಿ  ಭಟ್ಕಳ ಮುಸ್ಲಿಂ ಯುತ್ ಫೆಡರೇಷನ್ ಸಲ್ಲಿಸಿದ ಅವಿಸ್ಮರಣೀಯ ಸೇವೆಗಾಗಿ ಭಟ್ಕಳದ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು. 

ಭಟ್ಕಳದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವುದರ ಜೊತೆಗೆ, ಸಾಮಾಜಿಕ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಫೆಡರೇಷನ್ ನ ಯುವಕರು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಜನರ ಅಮೂಲ್ಯವಾದ ಸೇವೆ ಮಾಡಿದ್ದಾರೆ. ಈ ಸಮಯದಲ್ಲಿ ಜನರು ಲಾಕ್‍ಡೌನ್‍ಗಳಿಂದ ತಮ್ಮ ಮನೆಗಳಿಂದ ಹೊರಬರುವುದು ಕಷ್ಟಕರವಾಗಿತ್ತು. ಒಕ್ಕೂಟದ ಯುವಕರು ಅಗತ್ಯವಿರುವವರಿಗೆ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಂದೆಡೆ, ಒಕ್ಕೂಟದ ಯುವಕರು ಸಂಸ್ಥೆಯಿಂದ ಒದಗಿಸಿದ ಪಡಿತರ ಕಿಟ್‍ಗಳನ್ನು ಮನೆ ಮನೆಗೆ ತಲುಪಿಸಿದರು, ಲಾಕ್‍ಡೌನ್ ಸಮಯದಲ್ಲಿ ಅವರು ಮೊಬೈಲ್ ಚಿಕಿತ್ಸಾಲಯಗಳ ಮೂಲಕ ಮನೆ-ಮನೆಗೆ ಚಿಕಿತ್ಸೆ ನೀಡುವ ಮೂಲಕ ನೂರಾರು ರೋಗಿಗಳನ್ನು ತಲುಪಿದರು.

ಕರೋನ ಮೊದಲ ಅಲೆಯ ಸಮಯದಲ್ಲಿ ಸಹ, ಜನರು ಶವಗಳನ್ನು ಮುಟ್ಟಲು ಹೆದರುತ್ತಿದ್ದಾಗ, ಫೆಡರೇಶನ್‍ನ ಯುವಕರು ಮೃತದೇಹಗಳಿಗೆ ಸ್ನಾನ ಮಾಡಿಸುವ ಮತ್ತು ಅಂತ್ಯಕ್ರಿಯೆ ಮಾಡು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಸಂಸ್ಥೆಯು ಸ್ಥಾಪಿಸಿದ ಕೋವಿಡ್ ಕೇರ್ ಸೆಂಟರ್ ಸಹ ಶ್ಲಾಘನೀಯ ಕಾರ್ಯಗೊಂಡಿದೆ. ಈ ಎಲ್ಲಾ ಸೇವೆಗಳನ್ನು ಗುರುತಿಸಿದ ತಂಝೀಮ್ ಸಂಸ್ಥೆಯು ಅಭಿನಂದನಾ ಸಭೆಯನ್ನು ಆಯೋಜಿಸುವುದರ ಮೂಲಕ ಯುವಕರಲ್ಲಿ ನೈತಿಕ ಸ್ಥೈರ್ಯವನ್ನು ತುಂಬು ಕೆಲಸ ಮಾಡಿದೆ. 

ಈ ಸಂದರ್ಭದಲ್ಲಿ ತಂಝೀಮ್  ಅಧ್ಯಕ್ಷ ಸೈಯದ್ ಪರ್ವೇಝ್ ಎಸ್‍ಎಂ, ಉಪಾಧ್ಯಕ್ಷ ಮೊಹ್ತಾಶಮ್ ಬರ್ನಿ ಜಾಫರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂಜೆ ನದ್ವಿ, ಮಾಜಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಮುಹಿದ್ದೀನ್ ಖರೂರಿ,  ಇನಾಯತುಲ್ಲಾ ಶಾಬಂದ್ರಿ, ಜಿಲಾನಿ ಶಾಬಂದ್ರಿ, ಮೌಲ್ವಿ ಯಾಸಿರ್ ಬರ್ಮವರ್ ನದ್ವಿ, ಮೊಹ್ತಶಮ್ ಜಾನ್ ಅಬ್ದುಲ್ ರೆಹಮಾನ್, ಎಸ್ ಜೆ ಸೈಯದ್ ಹಾಶಿಮ್ ಮತ್ತಿತರರು ಉಪಸ್ಥಿತರಿದ್ದರು.

ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಪ್ರಧಾನ ಕಾರ್ಯದರ್ಶಿ ಉಮೈರ್ ರುಕ್ನುದ್ದೀನ್, ಉಪಾಧ್ಯಕ್ಷ ಮೌಲ್ವಿ ಅಂಜುಮ್ ಗಂಗಾವಳಿ ನದ್ವಿ ಮತ್ತು ಇತರ ಪದಾಧಿಕಾರಿಗಳು ಆಬಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News