‘ಹಿಂದುತ್ವ’ ಕುರಿತ ಮಹತ್ವದ ಸಮ್ಮೇಳನಕ್ಕೆ ಹಿಂದುತ್ವ ಗುಂಪುಗಳಿಂದಲೇ ಬೆದರಿಕೆ !

Update: 2021-09-07 17:50 GMT

ಬೋಸ್ಟನ್, ಸೆ. 7: ಹಿಂದುತ್ವ ಕುರಿತ ಮಹತ್ವದ ಆನ್‍ಲೈನ್ ಸಮ್ಮೇಳನಕ್ಕಾಗಿ ಅಮೆರಿಕದಲ್ಲಿ ಮೊದಲ ಬಾರಿಗೆ ವಿವಿಧ ಅಮೆರಿಕದ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಒಟ್ಟು ಸೇರಿದ್ದಾರೆ.

‌‘ಡಿಸ್‍ಮ್ಯಾಂಟಲಿಂಗ್ ಗ್ಲೋಬಲ್ ಹಿಂದುತ್ವ’ ಸಮ್ಮೇಳನವು ಭಾರತ ಮತ್ತು ಇತರರೆಡೆಗಳಲ್ಲಿರುವ ಹಿಂದೂ ಶ್ರೇಷ್ಠತಾ ಸಿದ್ಧಾಂತಕ್ಕೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಲಿದೆ. 53ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳ ಇಲಾಖೆಗಳು ಮತ್ತು ಕೇಂದ್ರಗಳು ಈ ಸಮ್ಮೇಳನದ ಸಹಪ್ರಾಯೋಜಕತ್ವವನ್ನು ವಹಿಸಿಕೊಂಡಿವೆ. ಹಿಂದುತ್ವ ಎನ್ನುವುದು ಶತಮಾನದಷ್ಟು ಹಳೆಯ ಬಲಪಂಥೀಯ ಚಳವಳಿಯಾಗಿದೆ.20 ಕೋಟಿಗೂ ಅಧಿಕ ಬಹು ಸಂಸ್ಕೃತಿಯ ಭಾರತದಲ್ಲಿ ಹಿಂದೂ ಜನಾಂಗೀಯ ದೇಶವೊಂದನ್ನು ನಿರ್ಮಿಸುವುದು ಅದರ ಉದ್ದೇಶವಾಗಿದೆ ಎಂದಿ aljazeera ವರದಿ ಮಾಡಿದೆ.

ಮೂರು ದಿನಗಳ ಸಮ್ಮೇಳನವು ಸೆಪ್ಟಂಬರ್ 10ರಂದು ಆರಂಭಗೊಳ್ಳುತ್ತದೆ.ಜಾಗತಿಕ ಹಿಂದುತ್ವ, ಜಾತಿತಾರತಮ್ಯ, ಇಸ್ಲಾಮೊಫೋಬಿಯ ಮತ್ತು ಭಾರತದಲ್ಲಿಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಗೋಷ್ಠಿಗಳು ನಡೆಯಲಿವೆ. 25ಕ್ಕೂ ಅಧಿಕ ವಿದ್ವಾಂಸರು, ಮಾನವಹಕ್ಕುಗಳ ಹೊರಾಟಗಾರರು ಮತ್ತು ಪತ್ರಕರ್ತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆದರೆ ಈ ಸಮ್ಮೇಳನಕ್ಕೆ ವಿವಿಧ ಹಿಂದುತ್ವ ಬಲಪಂಥೀಯ ಗುಂಪುಗಳು ಮತ್ತು ವ್ಯಕ್ತಿಗಳು ತೀವ್ರ ವಿರೋಧ ವ್ಯಕ್ತಪಡಿದ್ದಾರೆ ಎನ್ನಲಾಗಿದೆ. 

ಅವುಗಳು ಈ ಸಮ್ಮೇಳನವನ್ನು ‘ಹಿಂದೂಫೋಬಿಯ ಕೂಟ’ ಎಂಬುದಾಗಿ ಕರೆದಿವೆ. ಸಮ್ಮೇಳನದ ಸಂಘಟಕರು ಮತ್ತು ಭಾಷಣಕಾರರು ಕಳೆದ ಮೂರು ವಾರಗಳಿಂದ ನಿರಂತರವಾಗಿ ಬೆದರಿಕೆಗಳು ಮತ್ತು ಕಿರುಕುಳಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಹಿಂದುತ್ವದ ಜಾಗತಿಕ ಪರಿಣಾಮಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶವನ್ನು ಮಾತ್ರ ಸಮಾವೇಶ ಹೊಂದಿದೆ ಎಂದು ಸಂಘಟಕರು ಹೇಳುತ್ತಾರೆ. ಸಮ್ಮೇಳನದಲ್ಲಿ ಮೀನಾ ಕಂದಸಾಮಿ ಪಾಲ್ಗೊಳ್ಳಲಿದ್ದಾರೆ ಎಂಬುದಾಗಿ ಸಂಘಟಕರು ಪ್ರಕಟಿಸಿದ ಬಳಿಕ ಅವರನ್ನುಆನ್‍ಲೈನ್‍ನಲ್ಲಿ ನಿರಂತರವಾಗಿ ನಿಂದಿಸಲಾಗುತ್ತಿದೆ.

“ನಾನು 10 ವರ್ಷಗಳ ಹಿಂದೆ ಬರೆದ ಕವನವೊಂದನ್ನು ಹಿಂದೂ ಗುಂಪುಗಳು ಎತ್ತಿಕೊಂಡು ಅದು ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುತ್ತಿದೆ ಎಂಬುದಾಗಿ ಹೇಳುತ್ತಿದ್ದಾರೆ ಎಂದು ಕವಿ ಮತ್ತು ಜಾತಿ ವಿರೋಧಿ ಹೋರಾಟಗಾರ್ತಿಯಾಗಿರುವ ಕಂದಸಾಮಿ ಹೇಳುತ್ತಾರೆ. ಸಮ್ಮೇಳನದಲ್ಲಿ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡುವ ಹಲವು ಇಮೇಲ್‍ಗಳನ್ನು ಅವರು ಸ್ವೀಕರಿಸಿದ್ದಾರೆ.

ಟ್ವಿಟರ್ ಮತ್ತುಇನ್‍ಸ್ಟಾಗ್ರಾಮ್‍ನಲ್ಲಿ ಹಿಂದೂ ಬಲಪಂಥೀಯ ಗುಂಪುಗಳು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಹಾಗೂ ಕೊಲೆ ಬೆದರಿಕೆಗಳನ್ನೂ ಹಾಕಲಾಗಿದೆ ಎಂದು ವರದಿ ತಿಳಿಸಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ನಂದಿನಿ ಸುಂದರ್ ರನ್ನೂ ಆನ್‍ಲೈನ್‍ನಲ್ಲಿ ನಿಂದಿಸಲಾಗುತ್ತಿದೆ.

ಸಮ್ಮೇಳನಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಕಳೆದ ಮೂರು ವಾರಗಳ ಅವಧಿಯಲ್ಲಿ13 ಲಕ್ಷಕ್ಕೂ ಅಧಿಕ ಇಮೇಲ್‍ಗಳನ್ನು ಡಝನ್‍ಗಟ್ಟಲೆ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್‍ ಆಫ್‍ ಅಮೆರಿಕ, ಕೋಯಲೀಶನ್‍ ಆಫ್ ಹಿಂದೂಸ್‍ ಇನ್ ನಾರ್ತ್ ಅಮೆರಿಕ ಮತ್ತು ಹಿಂದೂ ಅಮೆರಿಕನ್ ಫೌಂಡೇಶನ್ ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News