ಲಾಯಿಲ : ನೂರುಲ್ ಹುದಾ ಎಜುಕೇಶನ್ ಟ್ರಸ್ಟ್, ಪಾಪ್ಯುಲರ್ ಫ್ರಂಟ್‌ ಬ್ಲಡ್ ಡೋನರ್ಸ್ ವತಿಯಿಂದ ರಕ್ತದಾನ ಶಿಬಿರ

Update: 2021-09-08 06:11 GMT

ಬೆಳ್ತಂಗಡಿ : ನೂರುಲ್ ಹುದಾ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಲಾಯಿಲ ಹಾಗೂ ಪಾಪ್ಯುಲರ್ ಫ್ರಂಟ್‌ ಬ್ಲಡ್ ಡೋನರ್ಸ್ ಫೋರಂ ಲಾಯಿಲ ಘಟಕ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರವು ಲಾಯಿಲದ ನೂರುಲ್ ಹುದಾ ಟ್ರಸ್ಟ್ ಸಭಾ ಭವನದಲ್ಲಿ ನಡೆಯಿತು.

ನೂರುಲ್ ಹುದಾ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಲಾಯಿಲ ಅಧ್ಯಕ್ಷ ಅನ್ಸಾರ್ ತಾಜ್ ಸಭಾಧ್ಯಕ್ಷತೆ ವಹಿಸಿದ್ದರು. ನೂರುಲ್ ಹುದಾ ಜುಮಾ ಮಸೀದಿ ಖತೀಬ್ ಮುಹಮ್ಮದ್ ರಿಯಾಝ್ ದುವಾ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯ ಶರೀಫ್ ಬೆಳಾಲ್, ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ ಅಗತ್ಯವಿರುವ ವ್ಯಕ್ತಿಗೆ ಮಾಡುವ ದಾನವಾಗಿದೆ ರಕ್ತದಾನ. ರಕ್ತವು ಯಾವುದೇ ಕಾರ್ಖಾನೆಯಲ್ಲಿ ತಯಾರಿಸುವ ವಸ್ತುವಲ್ಲ ಬದಲಾಗಿ ರಕ್ತವನ್ನು ಒಬ್ಬ ದಾನಿಯ ಮೂಲಕವೇ ಸಂಗ್ರಹಿಸಲು ಸಾಧ್ಯ ಎಂದರು.

ವೇದಿಕೆಯಲ್ಲಿ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಕ್ಬರ್ ಬೆಳ್ತಂಗಡಿ, ಗುರು ಎಂಟರ್'ಪ್ರೈಸಸ್ ಲಾಯಿಲ ಮಾಲಕ ಅಶೋಕ್ ಶೆಟ್ಟಿ, ಬ್ಲಡ್ ಡೋನರ್ಸ್ ಫೋರಂ ಲಾಯಿಲ ಅಧ್ಯಕ್ಷ ಹಾರಿಸ್ ಇಂಡಿಯನ್, ಬ್ಲಡ್ ಡೋನರ್ಸ್ ಫೋರಂ ಲಾಯಿಲ ಘಟಕ ಪ್ರಧಾನ ಕಾರ್ಯದರ್ಶಿ ಹಕೀಂ ಲಾಯಿಲ, ಲಾಯಿಲ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಅಝೀಝ್, ಉಪಾಧ್ಯಕ್ಷ ಹಮೀದ್ ಮಿಲನ್ ಹಾಗೂ ಎಚ್ಎ ಕರೀಂ ಮತ್ತು ಪ್ರಧಾನ ಕಾರ್ಯದರ್ಶಿ ಸೈಯದ್ ಶಬೀರ್, ನೂರುಲ್ ಹುದಾ ಎಜುಕೇಶನ್ ಆ್ಯಂಡ್ ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಹನೀಫ್ ಮತ್ತು ಗೌರವ ಸದಸ್ಯರಾದ ಕೆ.ಅಬೂಬಕ್ಕರ್, ಕಮ್ಯುನಿಟಿ ಡೆವಲಪ್ಮೆಂಟ್ ಜಿಲ್ಲಾ ಉಸ್ತುವಾರಿ ನವಾಝ್ ಕುದ್ರಡ್ಕ, ಬ್ಲಡ್ ಡೋನರ್ಸ್ ಫೋರಂ ಬೆಳ್ತಂಗಡಿ ಘಟಕ ಅಧ್ಯಕ್ಷ ಇಸ್ಮಾಯಿಲ್ ಐ ಬಿ ಹಾಗೂ ಬ್ಲಡ್ ಡೋನರ್ಸ್ ಫೋರಂ ಮದ್ದಡ್ಕ ಘಟಕ ಅಧ್ಯಕ್ಷ ಶಬೀರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News