ಕೆ.ಟಿ ವೇಣುಗೋಪಾಲ್ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಗೆ ಕಾಸರಗೋಡಿನ ಅಚ್ಯುತ ಚೇವಾರ್ ಆಯ್ಕೆ

Update: 2021-09-08 15:26 GMT

ಮುಂಬೈ, ಸೆ.8: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆ ನೀಡುವ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಗೆ ಈ ವರ್ಷ ಕಾಸರಗೋಡಿನ ಹಿರಿಯ ಕನ್ನಡಿಗ ಪತ್ರಕರ್ತ ಅಚ್ಯುತ ಎಂ.ಚೇವಾರ್ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಕರ್ತರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇದನ್ನು ಪ್ರಕಟಿಸಲಾಯಿತು. ಡಾ. ಸುನೀತಾ ಎಂ.ಶೆಟ್ಟಿ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಅಚ್ಯುತ ಚೇವಾರ್ ಅವರನ್ನು 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿತು. ಸಾ.ದಯಾ ಮತ್ತು ಹರೀಶ್ ಹೆಜ್ಮಾಡಿ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ.

ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸೆಯಲ್ಲಿಇದನ್ನುಪ್ರಕಟಿಸಲಾಯಿತು.ಡಾ.ಸುನೀತಾಎಂ.ಶೆಟ್ಟಿಅ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಅಚ್ಯುತ ಚೇವಾರ್ ಅವರನ್ನು 2021ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿತು. ಸಾ.ದಯಾ ಮತ್ತು ಹರೀಶ್ ಹೆಜ್ಮಾಡಿ ಸಮಿತಿಯ ಉಳಿದ ಸದಸ್ಯರಾಗಿದ್ದಾರೆ. ಈ ವಾರ್ಷಿಕ ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆ ಯನ್ನು ಹೊಂದಿರುತ್ತದೆ. ಮುಂಬಯಿಯ ಹಿರಿಯ ಪತ್ರಕರ್ತರಾದ ನ್ಯಾ.ವಸಂತ ಕಲಕೋಟಿ ಹಾಗೂ ಜಿ.ಕೆ.ರಮೇಶ್ 2019 ಮತ್ತು 2020ನೇ ಸಾಲಿನ ಪ್ರಶಸ್ತಿ ಯನ್ನು ಪಡೆದಿದ್ದರು. ಇದೇ ಸೆ.19ರ ರವಿವಾರ ಬೆಳಗ್ಗೆ ಮುಂಬಯಿ ಅಂಧೇರಿ ಯ ಸಾಲೀಟರಿ ಕಾರ್ಪೋರೇಟ್ ಪಾರ್ಕ್‌ನ ಲೋಟಸ್ ಸಭಾಗೃಹದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಮುಂಬೈ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಕಪಸಮದ ಪ್ರಧಾನ ಕಾರ್ಯದರ್ಶಿ ಅಶೋಕ್ ಎಸ್.ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಿನಾಡು ಕಾಸರಗೋಡು ಪೈವಳಿಕೆಯ ಹಿರಿಯ ಪತ್ರಕರ್ತರಾಗಿರುವ ಅಚ್ಯುತ ಚೇವಾರ್ ನಾಲ್ಕು ದಶಕಗಳಿಂದ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಮೊದಲ ಕೆಲವು ವರ್ಷ ಸ್ವತಂತ್ರ ಪತ್ರಕರ್ತನಾಗಿ ಕನ್ನಡ ಮಾತ್ರವಲ್ಲದೆ ಮಲಯಾಳ ಪತ್ರಿಕೆಗಳಿಗೂ ವರದಿ ಕಳುಹಿಸುತ್ತಿದ್ದರು. 1977ರ ನಂತರ ಅವರು ಉದಯವಾಣಿಯ ವರದಿಗಾರರಾಗಿದ್ದಾರೆ. ಅಲ್ಲದೇ ಅವರು ಪೈವಳಿಕೆ ಗ್ರಾಪಂ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷರಾಗಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾಗಿ ಸುಮಾರು ಎರಡೂವರೆ ದಶಕಗಳ ಕಾಲ ಜಪ್ರತಿನಿಧಿಯಾಗಿಯೂ ಜನಪ್ರಿಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News