ಎಲ್‌ಐಸಿಯಿಂದ ‘ಫಿಟ್ ಇಂಡಿಯಾ ಫ್ರೀಡಂ ರನ್ 2.0’
Update: 2021-09-08 23:47 IST
ಹೊಸದಿಲ್ಲಿ, ಸೆ. 8: ಭಾರತೀಯ ಜೀವ ವಿಮಾ ನಿಗಮದ ಹೈದರಾಬಾದ್‌ನಲ್ಲಿರುವ ದಕ್ಷಿಣ ಕೇಂದ್ರೀಯ ವಲಯ ಕಚೇರಿ ಸೆ. 8ರಂದು ಸೈಫಾಬಾದ್ ನಲ್ಲಿರುವ ವಲಯ ಕಚೇರಿ ಕಟ್ಟಡದಿಂದ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಪ್ರತಿಮೆ ವರೆಗೆ ‘ಫಿಟ್ ಇಂಡಿಯಾ ಫ್ರೀಡಂ ರನ್ 2.0’ ಅನ್ನು ಆಯೋಜಿಸಿತ್ತು.
ಭಾರತೀಯ ಜೀವ ವಿಮಾ ನಿಗಮದ ದಕ್ಷಿಣ ಕೇಂದ್ರೀಯ ವಲಯದ ಮ್ಯಾನೇಜರ್ ಎಂ. ಜಗನ್ನಾಥ್ ಅವರು ರ್ಯಾಲಿಗೆ ಚಾಲನೆ ನೀಡಿದರು. ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು 150ಕ್ಕೂ ಅಧಿಕ ಸಿಬ್ಬಂದಿ ಈ ಫ್ರೀಂಡಂ ರನ್‌ನಲ್ಲಿ ಪಾಲ್ಗೊಂಡರು.
ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಅಂಗವಾಗಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳನ್ನು ಒಳಗೊಂಡ ತನ್ನ ವ್ಯಾಪ್ತಿಯಲ್ಲಿರುವ ವಲಯದ ಎಲ್ಲ ಕಚೇರಿಗಳಲ್ಲಿ ಗುಂಪು ಚಟುವಟಿಕೆಯಾಗಿ ‘‘ಫಿಟ್ ಇಂಡಿಯಾ ಫ್ರೀಡಂ ರನ್ 2.0’’ ಅನ್ನು ಸೆ. 8ರಂದು ಆಯೋಜಿಸುವಂತೆ ಭಾರತೀಯ ಜೀವಾ ವಿಮಾ ನಿಗಮ ಕರೆ ನೀಡಿತ್ತು.