ಉಳ್ಳಾಲ: ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

Update: 2021-09-09 16:55 GMT

ಉಳ್ಳಾಲ: ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು  ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ವತಿಯಿಂದ ಮಹಿಳಾ ಸಿವಿಲ್ ಡಿಫನ್ಸ್ ಅಧಿಕಾರಿ ಸಾಬಿಯಾ ಸೈಫಿ ಅತ್ಯಾಚಾರ ಮತ್ತು ಬರ್ಬರ ಹತ್ಯೆ ಖಂಡಿಸಿ ತೊಕ್ಕೊಟ್ಟು ಬಸ್ ಸ್ಟ್ಯಾಂಡ್  ಬಳಿ ಗುರುವಾರ ಪ್ರತಿಭಟನೆ  ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ , ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಹಳಷ್ಟು ದೌರ್ಜನ್ಯ ಪ್ರಕರಣಗಳು ನಡೆದಿವೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಪರಾಧಿಗಳ ಅಪರಾಧ ಸಾಬೀತಾದರೂ ಶಿಕ್ಷೆ ಪ್ರಕಟ ವಿಳಂಬ ಆಗುತ್ತಿದೆ. ಆರೋಪಿಗಳ ವಿಚಾರಣೆ ಕೂಡಾ ವಿಳಂಬ ವಾಗುವ ಕಾರಣ ದಿಂದ ಸೂಕ್ತ ನ್ಯಾಯ ಸಿಗುತ್ತಿಲ್ಲ. ಮಹಿಳೆಯರಿಗೆ ದೌರ್ಜನ್ಯ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಿಲ್ಲ ಎಂದು ಆರೋಪಿಸಿದರು.

ದಿನೇಶ್ ರೈ , ತಾ.ಪಂ‌. ಮಾಜಿ ಸದಸ್ಯೆ ಸುರೇಖಾ ಮಾತನಾಡಿದರು. ಈ ಸಂದರ್ಭ ಆಳ್ವಿನ್ ಡಿಸೋಜ, ಮುಹಮ್ಮದ್ ಮೋನು, ಮುಸ್ತಫಾ ಉಳ್ಳಾಲ, ಉಸ್ಮಾನ್ ಕಲ್ಲಾಪು, ಸಲಾಂ ಉಚ್ಚಿಲ, ಸುರೇಖಾ ಚಂದ್ರ ಹಾಸ್, ಕಲಾವತಿ, ನಾಸೀರ್ ಸಾಮಣಿಗೆ, ಸಿರಾಜ್  ಇಂಟಕ್ , ಬಾವು ಮಾರಾಠಿ ಮೂಲೆ, ಇಕ್ಬಾಲ್ ಕೊಣಾಜೆ, ಮುನೀರ್ ಬಾವ,ಝಕರಿಯಾ, ದಿನೇಶ್ ರೈ, ನರಿಂಗಾನ ಗ್ರಾ.ಪಂ.ಉಪಾಧ್ಯಕ್ಷ ನವಾಝ್ , ನರಿಂಗಾನ, ಸತ್ತಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಅಶ್ರಫ್ ಉಳ್ಳಾಲ, ಎನ್ ಎಸ್ ಕರೀಂ, ಸಿದ್ದೀಕ್ ತಲಪಾಡಿ, ಉಳ್ಳಾಲ ನಗರ ಸಭಾ ಅಧ್ಯಕ್ಷ ಚಿತ್ರ ಕಲಾ,ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಸಪ್ನ ಹರೀಶ್, ಡೆನ್ನಿಸ್ ಡಿಸೋಜ, ಫಿರೋಝ್ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.
ರಹ್ಮಾನ್ ಕೋಡಿಜಾಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News