×
Ad

ಇಸ್ಲಮೋಫೋಬಿಯಾ, ಕಿರುಕುಳ ಪ್ರಸ್ತಾಪಿಸಿ ಗದ್ಗದಿತರಾದ ಬ್ರಿಟನ್ ಸಂಸದೆ

Update: 2021-09-11 10:23 IST
ಝಾರಾ ಸುಲ್ತಾನಾ (Photo credit: Twitter@zarahsultana)

ಲಂಡನ್, ಸೆ.11: ಬ್ರಿಟನ್ ಸಂಸತ್ತಿನಲ್ಲಿ ಗುರುವಾರ ನಡೆದ ಇಸ್ಲಮೋಫೋಬಿಯಾ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಸಂಸದೆಯೊಬ್ಬರು ರಾಜಕಾರಣಿಯಾಗಿ ತಾವು ಎದುರಿಸಿದ ಕಿರುಕುಳಗಳ ಬಗ್ಗೆ ಪ್ರಸ್ತಾವಿಸಿ ಗದ್ಗದಿತರಾದ ಪ್ರಸಂಗ ನಡೆಯಿತು.

ತಮಗೆ ಹಲವು ನಿಂದನಾತ್ಮಕ ಸಂದೇಶಗಳು ಬಂದಿರುವ ಬಗ್ಗೆ ಸಂಸತ್ತಿನಲ್ಲಿ ಕಾನ್ವೆಂಟ್ರಿ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಲೇಬರ್ ಪಕ್ಷದ ಸದಸ್ಯೆ ಝಾರಾ ಸುಲ್ತಾನಾ ವಿವರಿಸಿ ಕಣ್ಣೀರಿಟ್ಟರು.

"ಸುಲ್ತಾನಾ ನೀವು ಹಾಗೂ ನಿಮ್ಮ ಮುಸ್ಲಿಂ ಗುಂಪು ಮಾನವತೆಗೆ ಅಪಾಯ ಎಂದು ಒಬ್ಬ ನನಗೆ ಸಂದೇಶ ಕಳುಹಿಸಿದ್ದರೆ, ಹೋದಲ್ಲೆಲ್ಲ ನೀವು ಕ್ಯಾನ್ಸರ್; ಶೀಘ್ರವೇ ಯೂರೋಪ್ ನಿಮ್ಮನ್ನು ಹೊರಹಾಕಲಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಬ್ಬ ನನ್ನನ್ನು ಉಗ್ರಗಾಮಿಗಳ ಬಗ್ಗೆ ಅನುಕಂಪ ಹೊಂದಿದ್ದಾಗಿ ಆಪಾದಿಸಿ ಕಲ್ಮಶ ಎಂದು ಜರೆದಿದ್ದಾರೆ ಹಾಗೂ ಅವರ ಅಸಂವಿಧಾನಿಕ ಭಾಷೆಯಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ" ಎಂದು ಭಾವನಾತ್ಮಕವಾಗಿ ಬಣ್ಣಿಸಿದರು.

"ಸಂಸತ್ತಿಗೆ ಆಯ್ಕೆಯಾಗುವ ಮುನ್ನ ನಾನು ಮುಸ್ಲಿಂ ಮಹಿಳೆಯಾಗಿರುವ ಬಗ್ಗೆ ಸಾರ್ವಜನಿಕರ ಕಣ್ಣಲ್ಲಿ ನರ್ವಸ್ ಆಗುತ್ತಿದ್ದೆ" ಎಂದು ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಸುಲ್ತಾನಾ ಹೇಳಿದರು. ಬೆಳೆಯುತ್ತಿರುವ ಹಂತದಲ್ಲಿ ಬ್ರಿಟನ್‌ನ ಪ್ರಮುಖ ಮುಸ್ಲಿಮರು ಕಿರುಕುಳಕ್ಕೆ ಒಳಗಾಗುತ್ತಿದ್ದುದನ್ನು ನೋಡಿದ್ದೇನೆ. ನನ್ನ ಪಯಣ ಸುಲಭವಲ್ಲ ಎನ್ನುವುದು ನನಗೆ ತಿಳಿದಿದೆ" ಎಂದು ಮಾರ್ಮಿಕವಾಗಿ ನುಡಿದರು.

ಮುಸ್ಲಿಂ ಮಹಿಳೆಯಾಗಿರುವುದಕ್ಕೆ, ದಿಟ್ಟವಾಗಿ ಮಾತನಾಡುವುದಕ್ಕೆ ಮತ್ತು ಎಡಪಂಥೀಯಳಾಗಿರುವುದಕ್ಕೆ ಜನಾಂಗೀಯ ಕಿರುಕುಳ ಮತ್ತು ದ್ವೇಷಕ್ಕೆ ಒಳಗಾಗುತ್ತಿದ್ದೇನೆ. ಅಫ್ಘಾನಿಸ್ತಾನದಲ್ಲಿ ಮಾಜಿ ಪ್ರಧಾನಿ ಟೋನಿ ಬ್ಲೇರ್ ಆರಂಭಿಸಿದ ಕಾನೂನುಬಾಹಿರ ಸಮರವನ್ನು ಟೀಕಿಸಿದ ಸಂದರ್ಭದಲ್ಲಿ ನಿಂದನೆ ಹೆಚ್ಚಿತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News