ಹೊಸದಿಲ್ಲಿ: ಭಾರೀ ಮಳೆ, ವಿಮಾನ ನಿಲ್ದಾಣ, ನಗರದ ವಿವಿಧ ಭಾಗ ಜಲಾವೃತ
Update: 2021-09-12 00:17 IST
ಹೊಸದಿಲ್ಲಿ,ಸೆ. 11: ದಿಲ್ಲಿಯಲ್ಲಿ ಶನಿವಾರ ಭಾರೀ ಮಳೆ ಸುರಿದಿದ್ದು, ವಿಮಾನ ನಿಲ್ದಾಣದ ಮೂರು ಟರ್ಮಿನಲ್ಗಳ ಮುಂಭಾಗ ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಮಾನ ಇಲಾಖೆ ನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಪ್ರಯಾಣಿಕರಿಗಾದ ಅನಾನುಕೂಲತೆಗೆ ದಿಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಬೆಳಗ್ಗೆ 11.33ಕ್ಕೆ ಕ್ಷಮೆ ಕೋರಿದೆ. ಅಲ್ಲದೆ, ಸಣ್ಣ ಅವಧಿಯಲ್ಲಿ ನೆರೆ ನೀರು ಟರ್ಮಿನಲ್ 3ರ ಮುಂಭಾಗ ತಲುಪಿದೆ ಎಂದು ಹೇಳಿದೆ.
“ನಮ್ಮ ತಂಡ ಕಾರ್ಯಪ್ರವೃತ್ತವಾಗಿದೆ. ಸಮಸ್ಯೆಯನ್ನು ಪರಿಹರಿಸಲಾಗುವುದು” ಎಂದು ದಿಲ್ಲಿ ವಿಮಾನ ನಿಲ್ದಾಣದ ಅಧಿಕೃತ ಟ್ವೀಟರ್ ಖಾತೆ ಹೇಳಿದೆ.