ಉತ್ತರಪ್ರದೇಶ, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧೆ: ಸಂಜಯ್ ರಾವತ್

Update: 2021-09-12 09:06 GMT

ಮುಂಬೈ: ತಮ್ಮ ಪಕ್ಷವು ಉತ್ತರ ಪ್ರದೇಶ ಹಾಗೂ  ಗೋವಾದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಪಶ್ಚಿಮ ಉತ್ತರಪ್ರದೇಶದ ರೈತ ಸಂಘಟನೆಗಳು ತಮ್ಮ ಪಕ್ಷವನ್ನು ಬೆಂಬಲಿಸಲು ಸಿದ್ಧವಾಗಿವೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ರವಿವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಶಿವಸೇನೆ ಉತ್ತರಪ್ರದೇಶದಲ್ಲಿ 80 ರಿಂದ 100 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ (ಉತ್ತರಪ್ರದೇಶ 403 ಸದಸ್ಯರ ಅಸೆಂಬ್ಲಿ ಸ್ಥಾನ ಹೊಂದಿದೆ), ಆದರೆ ಗೋವಾ ವಿಧಾನಸಭೆಯಲ್ಲಿ ಸುಮಾರು 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ (ಇದರಲ್ಲಿ 40 ಸ್ಥಾನಗಳಿವೆ) ಎಂದರು.

"ಪಶ್ಚಿಮ ಉತ್ತರಪ್ರದೇಶದಲ್ಲಿ ರೈತ ಸಂಘಟನೆಗಳು ಶಿವಸೇನೆಯನ್ನು ಬೆಂಬಲಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿವೆ ಹಾಗೂ  ನಾವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು. ಗೋವಾದಲ್ಲಿ ಎಂವಿಎಯಂತಹ ಸೂತ್ರವನ್ನು ಅನ್ವೇಷಿಸಲು ಪ್ರಯತ್ನಗಳು ನಡೆಯುತ್ತಿವೆ. ನಾವು ಯಶಸ್ವಿಯಾಗುತ್ತೇವೆಯೇ ಎಂದು ನೋಡೋಣ" ಎಂದು ರಾಜ್ಯಸಭಾ ಸದಸ್ಯರು ಹೇಳಿದರು.

ಶಿವಸೇನೆ ಈ ಎರಡು ರಾಜ್ಯಗಳಲ್ಲಿ ತನ್ನ ಕಾರ್ಯಕರ್ತರನ್ನು ಹೊಂದಿದೆ. ಯಶಸ್ಸು ಅಥವಾ ವೈಫಲ್ಯವನ್ನು ಲೆಕ್ಕಿಸದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News