ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ

Update: 2021-09-12 17:39 GMT
photo: twitter

 ಅಹ್ಮದಾಬಾದ್,ಸೆ.12: ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರ ಶಿಷ್ಯರೆಂದೇ ಖ್ಯಾತರಾಗಿರುವ ಹಿರಿಯ ಬಿಜೆಪಿ ನಾಯಕ ಭೂಪೇಂದ್ರ ಪಟೇಲ್ ಅವರು ಗುಜರಾತಿನ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಶನಿವಾರ ಅಚ್ಚರಿಯ ಬೆಳವಣಿಗೆಯಲ್ಲಿ ವಿಜಯ ರೂಪಾನಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ರವಿವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಟೇಲ್ ಅವರನ್ನು ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
 ಈ ಹಿಂದೆ ಆನಂದಿಬೆನ್ ಪಟೇಲ್ ಪ್ರತಿನಿಧಿಸುತ್ತಿದ್ದ ಘಟ್ಲೋದಿಯಾ ಕ್ಷೇತ್ರದ ಶಾಸಕರಾಗಿರುವ ಭೂಪೇಂದ್ರ ಪಟೇಲ್ ಅಹ್ಮದಾಬಾದ್ ಮಹಾನಗರ ಪಾಲಿಕೆ ಸದಸ್ಯ ಮತ್ತು ಅಹ್ಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
000000000000000000000000000000000000000
ಸಹಿಷ್ಣುತೆ,‌ ಧರ್ಮದ ಕುರಿತು ಸ್ವಾಮಿ ವಿವೇಕಾನಂದರ ಸಂದೇಶ ಇಂದು ಹೆಚ್ಚು ಪ್ರಸ್ತುತ: ಸಿಜೆಐ ಎನ್.ವಿ.ರಮಣ (ವಾಸಪ್)
 ಹೊಸದಿಲ್ಲಿ,ಸೆ.12: ಧರ್ಮವು ಮೂಢನಂಬಿಕೆಗಳು ಮತ್ತು ಕಟ್ಟುನಿಟ್ಟುಗಳಿಗಿಂತ ಮೇಲಿರಬೇಕು ಎಂದು ರವಿವಾರ ಹೇಳಿದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರು, ಅರ್ಥಹೀನ ಮತ್ತು ಪಂಥೀಯ ಸಂಘರ್ಷಗಳು ಸಮಾಜದಲ್ಲಿ ಒಡ್ಡಿರುವ ಅಪಾಯಗಳ ಕುರಿತು ಸ್ವಾಮಿ ವಿವೇಕಾನಂದರ ಮಾತುಗಳಿಗೆ ಈಗ ಹೆಚ್ಚಿನ ಗಮನವನ್ನು ನೀಡುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ಹೈದರಾಬಾದ್ನ ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಎಕ್ಸ್ಲೆನ್ಸ್ನ 22ನೇ ಸ್ಥಾಪನಾ ದಿನ ಮತ್ತು ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೊ ಭಾಷಣದ 128ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ರಮಣ, ಸಮಕಾಲೀನ ಭಾರತದಲ್ಲಿ ಇಂದು ಸ್ವಾಮಿ ವಿವೇಕಾನಂದರು 1893ರಷ್ಟು ಹಿಂದೆಯೇ ಹೇಳಿದ್ದ ಮಾತುಗಳಿಗೆ ಗಮನ ನೀಡುವ ಹೆಚ್ಚಿನ ಅಗತ್ಯವಿದೆ. ಅವರೋರ್ವ ಪ್ರವಾದಿಯಾಗಿದ್ದರು. ಸಮಾನತಾವಾದಿ ಭಾರತೀಯ ಸಂವಿಧಾನವು ರೂಪುಗೊಳ್ಳುವ ಬಹುಹಿಂದೆಯೇ ಭವಿಷ್ಯದ ಘಟನೆಗಳನ್ನು ಮೊದಲೇ ನೋಡಿದವರಂತೆ ಅವರು ಜಾತ್ಯತೀತತೆಯನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು.
 ಎಲ್ಲರಿಗೂ ಒಳ್ಳೆಯದನ್ನು ಬಯಸುವುದು ಮತ್ತು ಸಹಿಷ್ಣುತೆ ಧರ್ಮದ ನಿಜವಾದ ಸಾರವಾಗಿದೆ;ಧರ್ಮವು ಮೂಢನಂಬಿಕೆಗಳು ಮತ್ತು ಕಟ್ಟುನಿಟ್ಟುಗಳಿಂದ ಮೇಲಿರಬೇಕು ಎನ್ನುವುದು ಸ್ವಾಮಿ ವಿವೇಕಾನಂದರ ನಂಬಿಕೆಯಾಗಿತ್ತು. ಈ ತತ್ತ್ವಗಳ ಮೂಲಕ ಪುನರುತ್ಥಾನ ಭಾರತದ ಅವರ ಕನಸನ್ನು ನನಸಾಗಿಸಲು ನಾವು ಇಂದಿನ ಯುವಜನರಲ್ಲಿ ಸ್ವಾಮೀಜಿಯವರ ಆದರ್ಶಗಳನ್ನು ಮೈಗೂಡಿಸಬೇಕು ಎಂದ ಅವರು,ತಮ್ಮ ಕಾರ್ಯಗಳು ದೇಶನಿರ್ಮಾಣ ಪ್ರಕ್ರಿಯೆಯ ಭಾಗವಾಗಿವೆ ಎನ್ನುವದು ಯುವಜನರಿಗೆ ತಿಳಿದಿರುವ ಅಗತ್ಯವಿದೆ ಎಂದು ಹೇಳಿದರು.


ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯುವ ಸ್ವಾತಂತ್ರ ಹೋರಾಟಗಾರರ ಪಾತ್ರವನ್ನು ನೆನಪಿಸಿದ ನ್ಯಾ.ರಮಣ,ಬ್ರಿಟಿಷರ ಕ್ರೂರ ಆಡಳಿತದ ವಿರುದ್ದ ಬುಡಕಟ್ಟು ಸಮುದಾಯವನ್ನು ಒಗ್ಗೂಡಿಸಿ ಅವರ ಭೂಮಿ ಹಕ್ಕುಗಳನ್ನು ಕೊಡಿಸಿದ್ದ ಯುವ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅಥವಾ ಸ್ವತಂತ್ರ ಭಾರತಕ್ಕಾಗಿ ತಮ್ಮ ಕೊನೆಯುಸಿರಿನವರೆಗೂ ಕೆಚ್ಚೆದೆಯಿಂದ ಹೋರಾಡಿದ್ದ ಭಗತ ಸಿಂಗ್,ಸುಖದೇವ ಮತ್ತು ರಾಜಗುರು ಅವರಂತಹ ಯುವ ನಾಯಕರ ಹೆಸರುಗಳಿಲ್ಲದಿದ್ದರೆ ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯು ಅಪೂರ್ಣವಾಗುತ್ತದೆ ಎಂದರು.


ತನ್ನ ಗ್ರಾಮೀಣ ಹಿನ್ನೆಲೆಯನ್ನು ಸ್ಮರಿಸಿಕೊಂಡು,ಇಂದು ಮಾಹಿತಿಗಳು ಹೇರಳವಾಗಿ ಲಭ್ಯವಾಗುತ್ತಿವೆ ಎಂದ ಅವರು,ವ್ಯಾಪಕವಾಗಿ ಓದುವಿಕೆಯ ಮೂಲಕ ಅರಿವನ್ನು ಹೊಂದುವಂತೆ ಮತ್ತು ವಿವಿಧ ಅಭಿಪ್ರಾಯಗಳಿಗೆ ಅವಕಾಶ ಕಲ್ಪಿಸುವಂತೆ ಯುವಜನರನ್ನು ಆಗ್ರಹಿಸಿದರು.


ನಗರ ಪ್ರದೇಶಗಳಲ್ಲಿಯೂ ಅಸ್ತಿತ್ವದಲ್ಲಿರುವ ವಿಭಜನೆಯ ಬಗ್ಗೆ ಪ್ರಜ್ಞೆ ಬೆಳೆಸಿಕೊಳ್ಳಲು ಕೊಳಗೇರಿಗಳಿಗೆ ಭೇಟಿ ನೀಡುವಂತೆ ಯುವಜನರನ್ನು ಉತ್ತೇಜಿಸಿದ ನ್ಯಾ.ರಮಣ,ಗ್ರಾಮೀಣ ಬದುಕಿನ ಬಗ್ಗೆ ತಿಳಿದುಕೊಳ್ಳಲು ಗ್ರಾಮಗಳಿಗೂ ಭೇಟಿ ನೀಡುವಂತೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News