ಮಧ್ಯಪ್ರದೇಶ: ಪಿಕ್ ನಿಕ್ ಸ್ಪಾಟ್ ನ ನೀರಿನಲ್ಲಿ ಮುಳುಗಿ ಬಾಲಕ ಸೇರಿ ಮೂವರು ಮೃತ್ಯು
ವಿದಿಶಾ: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಹಾಲಾಲಿ ಅಣೆಕಟ್ಟಿನ ಬಳಿ ಇರುವ ಕಾರಂಜಿ ನೀರಿನಲ್ಲಿ ಮುಳುಗಿ ಮೂವರು ಹದಿಹರೆಯದ ಹುಡುಗರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವನ್ನಪ್ಪಿದವರನ್ನು ಅಮಿತ್ ಪಟೇಲ್ (17), ಮೋಹಿತ್ ಶರ್ಮಾ (18) ಹಾಗೂ ಅಭ್ಯಾ ಶರ್ಮಾ (19) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಭೋಪಾಲ್‌ನ ಅಶೋಕ ನಗರ ಪ್ರದೇಶದವರು ಮತ್ತು ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಸ್ಥಳಕ್ಕೆ ಪಿಕ್ನಿಕ್‌ಗೆ ಹೋಗಿದ್ದರು ಎಂದು ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅರುಣ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
"ಅವರು ಕಾರಂಜಿ ಅಡಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿದರು. ಒಬ್ಬ ಹುಡುಗ ಮೊದಲು ಕಾರಂಜಿ ನೀರಿನಲ್ಲಿ ಮುಳುಗಲು ಆರಂಭಿಸಿದ. ಆತನ ಇಬ್ಬರು ಸ್ನೇಹಿತರು ಆತನನ್ನು ರಕ್ಷಿಸಲು ಧಾವಿಸಿದರು. ಆದರೆ, ಮೂವರೂ ನೀರಿನಲ್ಲಿ ಮುಳುಗಿದರು. ಘಟನೆಯು ಖಮ್ಖೇಡಾ ಪೊಲೀಸ್ ಹೊರಠಾಣೆ ಪ್ರದೇಶದಲ್ಲಿ ನಡೆದಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.