ಗಾಝಾ ಪಟ್ಟಿಯಲ್ಲಿ ಇಸ್ರೇಲ್ ವಾಯುದಾಳಿ

Update: 2021-09-12 18:41 GMT

ಜೆರುಸಲೇಂ, ಸೆ.12: ತನ್ನ ಪ್ರದೇಶದ ಮೇಲೆ ಫೆಲೆಸ್ತೀನ್ ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿ ಗಾಝಾ ಪಟ್ಟಿಯ ಮೇಲೆ ರವಿವಾರ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಸೋಮವಾರ 6 ಫೆಲೆಸ್ತೀನ್ ಕೈದಿಗಳು ಬಿಗಿಭದ್ರತೆಯ ಇಸ್ರೇಲ್ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾದಂದಿನಿಂದ ಇಸ್ರೇಲ್-ಪೆಲೆಸ್ತೀನ್ ಮಧ್ಯೆ ಉದ್ವಿಗ್ ನತೆ ನೆಲೆಸಿದೆ. ಇವರಲ್ಲಿ 4 ಖೈದಿಗಳನ್ನು ಮತ್ತೆ ಬಂಧಿಸಿರುವುದಾಗಿ ಇಸ್ರೇಲ್ ಹೇಳಿದೆ.

ಶುಕ್ರವಾರ ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನ್ ಪ್ರಜೆಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದ ಇಸ್ರೇಲ್ ಪೊಲೀಸರು ಪರಾರಿಯಾಗಿದ್ದ ಇಬ್ಬರು ಕೈದಿಗಳನ್ನು ಬಂಧಿಸಿದ್ದರು. ಶನಿವಾರ ಮತ್ತೆ ಇಬ್ಬರನ್ನು ಬಂಧಿಸಲಾಗಿತ್ತು. ಈ ಕಾರ್ಯಾಚರಣೆ ವಿರೋಧಿಸಿ ಫೆಲೆಸ್ತೀನ್ ಪಡೆಗಳು ಇಸ್ರೇಲ್ನತ್ತ ರಾಕೆಟ್ ದಾಳಿ ನಡೆಸಿವೆ ಎಂದು ವರದಿಯಾಗಿದೆ.

  ಇದಕ್ಕೆ ಪ್ರತಿಯಾಗಿ ಹಮಾಸ್ನ ನೆಲೆಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಸಾವು ನೋವಿನ ಬಗ್ಗೆ ಮಾಹಿತಿಯಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News