ದಿಲ್ಲಿ:ಕಟ್ಟಡ ಕುಸಿತ, ನಡೆದು ಹೋಗುತ್ತಿದ್ದ ಎರಡು ಮಕ್ಕಳು ಅವಶೇಷಗಳಲ್ಲಿ ಸಿಲುಕಿ ಮೃತ್ಯು

Update: 2021-09-13 12:05 GMT
photo: The New Indian express

ಹೊಸದಿಲ್ಲಿ: ಉತ್ತರ ದಿಲ್ಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದಿದ್ದು, ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಟ್ಟಡದ ಸಮೀಪ ಹಾದು ಹೋಗುತ್ತಿದ್ದ ಇಬ್ಬರು ಮಕ್ಕಳು ಅವಶೇಷಗಳಡಿ ಸಿಲುಕಿದ್ದು, ಅವರನ್ನುಅವಶೇಷಗಳಿಂದ ಹೊರ ತೆಗೆದರೂ ಬಳಿಕ ತೀವ್ರ ಗಾಯದಿಂದಾಗಿ ಮೃತಪಟ್ಟಿವೆ.

ಅವಶೇಷಗಳಿಂದ ಹೊರಗೆ ತಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಮತ್ತೊಂದೆಡೆ, ಇನ್ನೂ 3-4 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಉತ್ತರ ದಿಲ್ಲಿಯ ಸಬ್ಜಿ ಮಂಡಿ ಪ್ರದೇಶದಲ್ಲಿ ಸೋಮವಾರ ಐದು ಅಗ್ನಿಶಾಮಕ ಯಂತ್ರಗಳು ಹಾಗೂ  ಅರ್ತ್ ಮೂವರ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಇಬ್ಬರು ಮಕ್ಕಳನ್ನು ಹೊರತುಪಡಿಸಿ ಇನ್ನೊಬ್ಬ ವೃದ್ದರೊಬ್ಬರನ್ನು ಅವಶೇಷಗಳಿಂದ ಹೊರಗೆ ತರಲಾಯಿತು, ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಸಿಯುತ್ತಿರುವ ಕಟ್ಟಡದಿಂದ ಒಂದು ಕಾರು ಕೂಡ ಜಖಂಗೊಂಡಿದೆ.

ಉತ್ತರ ದಿಲ್ಲಿ ಪ್ರದೇಶದಲ್ಲಿ ಕಟ್ಟಡ ಕುಸಿದಾಗ ಪಕ್ಕದ ಕೆಲವು ಕಟ್ಟಡಗಳು ನಡುಗಿದವು ಹಾಗೂ  ವಿದ್ಯುತ್ ಸ್ಥಗಿತಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News