ವಿಶ್ವಕಪ್ ನಂತರ ಕೊಹ್ಲಿ ಸೀಮಿತ ಓವರ್ ಕ್ರಿಕೆಟ್ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆಯೇ? ಬಿಸಿಸಿಐ ಅಧಿಕಾರಿ ಹೇಳಿದ್ದೇನು?

Update: 2021-09-13 12:28 GMT

ಹೊಸದಿಲ್ಲಿ: ಟ್ವೆಂಟಿ- 20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಭಾರತದ ಸೀಮಿತ ಓವರ್ ಗಳ ನಾಯಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆಂಬ ವರದಿಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಸೋಮವಾರ ತಿರಸ್ಕರಿಸಿದ್ದಾರೆ.

 "ಈ ವಿಷಯದ ಬಗ್ಗೆ ಮಂಡಳಿಯು ಏನನ್ನೂ ಚರ್ಚಿಸಿಲ್ಲ. ಕೊಹ್ಲಿ ಅವರು ನಾಯಕತ್ವದಲ್ಲಿ ಮುಂದುವರಿಯುತ್ತಾರೆ. ಈ ಎಲ್ಲ ವರದಿಯು ಮೂರ್ಖತನದ್ದು.  ಇದೆಲ್ಲ ಮಾಧ್ಯಮ ಸೃಷ್ಟಿಯಾಗಿದೆ. ಇಂತಹ ಯಾವುದೇ ಬೆಳವಣಿಗೆ ನಡೆಯುತ್ತಿಲ್ಲ. ಈ ವಿಷಯದ ಬಗ್ಗೆ ಚರ್ಚಿಸಲು ಬಿಸಿಸಿಐ ಭೇಟಿ ಮಾಡಿಲ್ಲ ಅಥವಾ ಚರ್ಚಿಸಿಲ್ಲ" ಎಂದು ಅರುಣ್ ಧುಮಾಲ್ NDTV ಗೆ ತಿಳಿಸಿದರು.

ಕೊಹ್ಲಿ 45 ಟ್ವೆಂಟಿ- 20 ಅಂತರ್ ರಾಷ್ಟ್ರೀಯ ಪಂದ್ಯಗಳು ಹಾಗೂ  95 ಏಕದಿನ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದು, ಟ್ವೆಂಟಿ-20 ಪಂದ್ಯದಲ್ಲಿ 27 ಹಾಗೂ  ಏಕದಿನ ಪಂದ್ಯಗಳಲ್ಲಿ 65  ಪಂದ್ಯಗಳಲ್ಲಿ ಭಾರತವು ಗೆಲುವು ಸಾಧಿಸಿದೆ.

ಟ್ವೆಂಟಿ- 20 ವಿಶ್ವಕಪ್ ಅಕ್ಟೋಬರ್ 17 ರಂದು ಆರಂಭವಾಗಲಿದೆ ಮತ್ತು ನವೆಂಬರ್ 14 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮಾನ್‌ನಲ್ಲಿ ನಡೆಯಲಿದೆ. ಅಕ್ಟೋಬರ್ 12 ರಂದು ಸೂಪರ್ 12 ಗ್ರೂಪ್ 2 ಹಂತದ ಮೊದಲ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News