×
Ad

ಎನ್‌ಇಪಿ ಅನ್ವಯ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಪಠ್ಯದಲ್ಲಿ ರಾಮಾಯಣ, ಮಹಾಭಾರತ, ರಾಮಚರಿತಮಾನಸ ಅಳವಡಿಕೆ: ಶಿಕ್ಷಣ ಸಚಿವ

Update: 2021-09-13 19:30 IST
Photo: ANI

ಹೊಸದಿಲ್ಲಿ: ಈಗಾಗಲೇ ವಿವಾದಿತ ಎನ್‌ಇಪಿ ಕಾಯ್ದೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಈಗಾಗಲೇ ಇದನ್ನು ಜಾರಿ ಮಾಡಲಾಗಿದೆ. ಇದೀಗ ಮಧ್ಯಪ್ರದೇಶದಲ್ಲಿ ಎನ್‌ಇಪಿ ಕಾಯ್ದೆ ಅನ್ವಯ ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ರಾಮಾಯಣ, ಮಹಾಭಾರತ ಹಾಗೂ ರಾಮಚರಿತ ಮಾನಸವನ್ನು ಸೇರ್ಪಡೆಗೊಳಿಸಲಾಗುವುದು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಮೋಹನ್‌ ಯಾದವ್‌ ಹೇಳಿಕೆ ನೀಡಿದ್ದಾರೆ. 

ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, "ಯಾರಿಗೆಲ್ಲಾ ಶ್ರೀರಾಮನ ಸಂಸ್ಕಾರಗಳು, ಸಮಕಾಲೀನ ಕೃತಿಗಳನ್ನು ಓದಬೇಕೆಂದಿದೆಯೋ, ಅವರು ಅದನ್ನು ಇಂಜಿನಿಯರಿಂಗ್‌ ಕೋರ್ಸ್‌ ನಲ್ಲಿ ಕಲಿಯಬಹುದಾಗಿದೆ" ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ. 

"ನಮ್ಮ ಬೋಧನಾ ವರ್ಗದ ಶಿಕ್ಷಕರು ಎನಿಪಿ 2020ರ ಅಡಿಯಲ್ಲಿ ಪಠ್ಯಕ್ರಮಗಳನ್ನು ರಚಿಸಿದ್ದಾರೆ. ನಮಗೆ ನಮ್ಮ ಗತ ವೈಭವದ ಇತಿಹಾಸಗಳು ಮರುಕಳಿಸುವಂತೆ ಮಾಡುತ್ತಿದ್ದೇವೆ. ಈ ಕುರಿತು ಯಾರಿಗೂ ಯಾವುದೇ ತೊಂದರೆಗಳಿರುವುದಿಲ್ಲ" ಎಂದು ಅವರು ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News