ಸ್ವಾತಂತ್ರ್ಯದ 75ನೇ ವರ್ಷದಲ್ಲಿ 75 ಕೋ.ಡೋಸ್ ಲಸಿಕೆ ವಿತರಿಸಲಾಗಿದೆ: ಸಚಿವ ಮಾಂಡವೀಯ

Update: 2021-09-13 17:20 GMT

ಹೊಸದಿಲ್ಲಿ,ಸೆ.13: ದೇಶದಲ್ಲಿ ವಿತರಿಸಲಾಗಿರುವ ಕೋವಿಡ್ ಲಸಿಕೆ ಡೋಸ್ಗಳ ಸಂಖ್ಯೆ ಸ್ವಾತಂತ್ರದ ಅಮೃತ ಮಹೋತ್ಸವ ವರ್ಷದಲ್ಲಿ 75 ಕೋಟಿಯನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಸೋಮವಾರ ಟ್ವೀಟಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್ ಸಬ್ ಕಾ ಪ್ರಯಾಸ್’ ಮಂತ್ರದೊಂದಿಗೆ ವಿಶ್ವದ ಅತ್ಯಂತ ದೊಡ್ಡ ಲಸಿಕೆ ಅಭಿಯಾನವು ನಿರಂತರವಾಗಿ ಹೊಸ ಎತ್ತರಗಳನ್ನು ತಲುಪುತ್ತಲೇ ಇದೆ ಎಂದು ಮಾಂಡವೀಯ ತಿಳಿಸಿದ್ದಾರೆ.

ಈ ನಡುವೆ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಿರುವುದಕ್ಕಾಗಿ ಭಾರತವನ್ನು ಅಭಿನಂದಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು,ಮೊದಲ 10 ಕೋ.ಡೋಸ್ಗಳಿಗೆ 85 ದಿನಗಳನ್ನು ತೆಗೆದುಕೊಂಡಿದ್ದ ಭಾರತವು ಈಗ ಕೇವಲ 13 ದಿನಗಳಲ್ಲಿ 65 ಕೋ.ಡೋಸ್ಗಳಿಂದ 75 ಕೋ. ಡೋಸ್ ಗಳ ಗುರಿಯನ್ನು ಸಾಧಿಸಿದೆ ಎಂದು ಪ್ರಶಂಸಿಸಿದೆ.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಈ ಸಾಧನೆಗೆ ಜಂಟಿ ಪ್ರಯತ್ನಗಳಿಗಾಗಿ ಸಾರ್ವಜನಿಕರು,ಕೊರೋನ ವಾರಿಯರ್ ಗಳು ಹಾಗೂ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ವಿತರಿಸಿದ ರಾಜ್ಯ ಸರಕಾರಗಳು ಮತ್ತು ಪ್ರಧಾನಿಯವರನ್ನು ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News