ದೇಶದ ಎಲ್ಲಾ ನಾಗರಿಕರೂ ಹಿಂದಿ ಭಾಷೆ ಬಳಸಲು ಪ್ರತಿಜ್ಞೆ ಕೈಗೊಳ್ಳಬೇಕು: ಗೃಹಸಚಿವ ಅಮಿತ್‌ ಶಾ

Update: 2021-09-14 11:30 GMT

ಹೊಸದಿಲ್ಲಿ: ಹಿಂದಿ ದಿವಸದ ಸಂದರ್ಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ದೇಶದ ಎಲ್ಲಾ ಜನರೂ ಹಿಂದಿ ಭಾಷೆಯನ್ನು ಬಳಸಲು ಪ್ರತಿಜ್ಞೆ ಕೈಗೊಳ್ಳಬೇಕು ಎಂದರು. ಮಾತ್ರವಲ್ಲದೇ, "ನಮ್ಮ ಸಾಂಸ್ಕೃತಿಕ ಪ್ರಜ್ಞೆ ಮತ್ತು ರಾಷ್ಟ್ರೀಯ ಏಕತೆಯ ಮೂಲ ಆಧಾರ" ಹಿಂದಿ ಭಾಷೆಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

"ಆತ್ಮ ನಿರ್ಭರ ಭಾರತ ಎಂದರೆ ಭಾಷೆಯೊಂದಗೂ ಆತ್ಮ ನಿರ್ಭರವನ್ನು ಹೊಂದುವುದಾಗದೆ. ಮಾತೃಭಾಷೆ ಮತ್ತು ಅಧಿಕೃತ ಭಾಷೆಗಳ ಸಮನ್ವಯದಲ್ಲಿ ಎಲ್ಲಾ ಪ್ರಗತಿ ಅಡಗಿದೆ" ಎಂದು ಅವರು ಹೇಳಿದರು.

"ಈ ಹಿಂದಿ ದಿವಸ್‌ ನ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳು ತಮ್ಮ ಮೂಲ ಮಾತೃಭಾಷೆಯೊಂದಿಗೆ ಅಧಿಕೃತ ಭಾಷೆಗಳಲ್ಲೊಂದಾದ ಹಿಂದಿಯನ್ನೂ ಹಂತಹಂತವಾಗಿ ಬಳಸಬೇಕೆಂದು ಪ್ರತಿಜ್ಞೆ ಕೈಗೊಳ್ಳಬೇಕಾಗಿ ನಾನು ಕೇಳಿಕೊಳ್ಳುತ್ತೇನೆ. ಭಾರತದ ಪ್ರಗತಿಯು ಮಾತೃಭಾಷೆ ಮತ್ತು ಅಧಿಕೃತ ಭಾಷೆಗಳ ಸಮನ್ವಯದಲ್ಲಿ ಇದೆ" ಎಂದು ಅವರು ಟ್ವೀಟ್‌ ಕೂಡಾ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News