ಹರ್ಯಾಣ: ‘ನಿಗೂಢ ಜ್ವರ’ ದಿಂದ 10 ದಿನಗಳಲ್ಲಿ 8 ಮಕ್ಕಳು ಮೃತ್ಯು

Update: 2021-09-15 12:05 GMT
ಸಾಂದರ್ಭಿಕ ಚಿತ್ರ

 ಚಂಡೀಗಡ: ಹರ್ಯಾಣದ ಪಲ್ವಾಲ್ ಜಿಲ್ಲೆಯ ಚಿಲ್ಲಿ ಎಂಬ ಸಣ್ಣ ಹಳ್ಳಿಯಲ್ಲಿ ಕಳೆದ 10 ದಿನಗಳಲ್ಲಿ 'ನಿಗೂಢ ಜ್ವರ' ದಿಂದಾಗಿ ಎಂಟು ಮಕ್ಕಳು ಸಾವನ್ನಪ್ಪಿವೆ. ಕನಿಷ್ಠ 44 ಜನರು ಅವರಲ್ಲಿ 35 ಅಪ್ರಾಪ್ತ ವಯಸ್ಕರಲ್ಲಿ ಜ್ವರ ತರಹದ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು ಎಲ್ಲರನ್ನು  ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಸಾವಿನ ಕಾರಣವನ್ನು ಆರೋಗ್ಯ ಅಧಿಕಾರಿಗಳು ಇನ್ನೂ ನಿರ್ಧರಿಸದಿದ್ದರೂ ಹೆಚ್ಚಿನ ಪ್ರಕರಣಗಳಲ್ಲಿ ಜ್ವರ ಹಾಗೂ  ಕಡಿಮೆ ಪ್ಲೇಟ್ಲೆಟ್ ಕಂಡುಬಂದಿರುವ ಕಾರಣ ಅವರಲ್ಲಿ ಡೆಂಗ್ಯೂ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.

ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿರುವ ಆರೋಗ್ಯ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಡೆಂಗ್ಯೂ ಹಾಗೂ  ನೈರ್ಮಲ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜ್ವರ ಬರುವವರಿಗೆ ಡೆಂಗ್ಯೂ ಹಾಗೂ  ಮಲೇರಿಯಾ ಪರೀಕ್ಷೆ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಅವರಿಗೆ ಕೋವಿಡ್ ಪರೀಕ್ಷೆಯನ್ನೂ ಮಾಡಲಾಗುತ್ತಿದೆ.

"ಮಕ್ಕಳು ಜ್ವರದಿಂದ ಬಳಲುತ್ತಿದ್ದಾರೆ ಮತ್ತು ಸಾವು ಸಂಭವಿಸಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ನಾವು ಮನೆಗಳಿಗೆ ಭೇಟಿ ನೀಡುತ್ತಿದ್ದೆವು. ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ; ಔಷಧಿಗಳನ್ನು ವಿತರಿಸಲಾಗುತ್ತಿದೆ. ತಂಡವು ಹಗಲು-ಇರುಳಿನಲ್ಲೂ ಕೆಲಸ ಮಾಡುತ್ತಿದೆ. ನೈರ್ಮಲ್ಯದ ಕೊರತೆಯನ್ನು ನಾವು ಗಮನಿಸಿದ್ದೇವೆ. ಜ್ವರಕ್ಕೆ ಕಾರಣಗಳನ್ನು ಕಂಡು ಹಿಡಿಯಲು ಹೆಚ್ಚುವರಿ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ "ಎಂದು ಎಸ್‌ಎಂಒ ಹಾತಿನ್, ವಿಜಯ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News