ಗುಜರಾತ್ ಸ್ಪೀಕರ್ ರಾಜೇಂದ್ರ ತ್ರಿವೇದಿ ರಾಜೀನಾಮೆ

Update: 2021-09-16 09:03 GMT
Facebook photo

ಅಹಮದಾಬಾದ್: ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ನೇತೃತ್ವದ ಹೊಸ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭದ ಕೆಲವೇ ಗಂಟೆಗಳ ಮೊದಲು ಗುಜರಾತ್ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ ಗುರುವಾರ ಬೆಳಿಗ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ವಡೋದರದ ರಾವಪುರದ ಶಾಸಕರಾಗಿರುವ ತ್ರಿವೇದಿ ಅವರು ತಮ್ಮ ರಾಜೀನಾಮೆಯನ್ನು ಉಪ ಸ್ಪೀಕರ್‌ಗೆ ಸಲ್ಲಿಸಿದರು. ತಾನು  ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ತ್ರಿವೇದಿ ತಿಳಿಸಿದ್ದಾರೆ.

ಗುಜರಾತ್ ಶಾಸಕಾಂಗ ಸಚಿವಾಲಯವು ತಕ್ಷಣವೇ ಹೊರಡಿಸಿದ ಅಧಿಸೂಚನೆಯು ತ್ರಿವೇದಿ ಅವರು "16 ನೇ ಸೆಪ್ಟೆಂಬರ್ 2021, ಬೆಳಗ್ಗೆ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ದೃಢಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News