×
Ad

ರೈತರ ಮೇಲಿನ 900 ಪ್ರಕರಣಗಳನ್ನು ಹಿಂಪಡೆಯಲು ಉತ್ತರಪ್ರದೇಶ ಸರಕಾರ ನಿರ್ಧಾರ

Update: 2021-09-16 19:56 IST

ಲಕ್ನೊ: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಮೊದಲು ರೈತರ ಅಶಾಂತಿಯನ್ನು ಶಮನಗೊಳಿಸಲು ಉತ್ತರಪ್ರದೇಶದ ಆದಿತ್ಯನಾಥ್ ಸರಕಾರವು ರೈತರ ಮೇಲೆ ದಾಖಲಾಗಿರುವ ಸುಮಾರು 900 ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ.

ಈ ಸಂಬಂಧ ರಾಜ್ಯ ಸರಕಾರದ ನಿರ್ಧಾರವನ್ನು ಸಿಎಂ ಆದಿತ್ಯನಾಥ್ ಘೋಷಿಸಿದ ನಂತರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ ಈ ಕುರಿತು ಆದೇಶ ಹೊರಡಿಸಿದ್ದಾರೆ.

ರಾಜ್ಯದ ಆರ್ಥಿಕತೆ ಹಾಗೂ  ಅಭಿವೃದ್ಧಿಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ರಾಜ್ಯ ಸರಕಾರವು ರೈತರ ಮೇಲೆ ಬೆಳೆ ತ್ಯಾಜ್ಯ ದಹನಕ್ಕೆ ಸಂಬಂಧಿಸಿದ 868 ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಅವಸ್ಥಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೊರೋನ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ರೈತರ ಹಿತಾಸಕ್ತಿಗಳನ್ನು ಕಾಪಾಡಲು ರಾಜ್ಯ ಸರಕಾರವು ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಬೆಳೆ ತ್ಯಾಜ್ಯ ದಹನ ಪ್ರಕರಣಗಳನ್ನು ಹಿಂಪಡೆಯಲು ಆದೇಶಿಸಿದೆ ಎಂದು ಅವಸ್ಥಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News