×
Ad

ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಝುಬೈರ್‌ ರ ಟ್ವೀಟ್‌ ತೆಗೆದುಹಾಕುವಂತೆ ಹೈಕೋರ್ಟ್‌ ಗೆ ಎನ್ಸಿಪಿಸಿಆರ್ ಮನವಿ

Update: 2021-09-17 15:12 IST
Photo: Twitter@zoo_bear

ಹೊಸದಿಲ್ಲಿ: ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರ ಪೋಸ್ಟ್ ಅನ್ನು ತೆಗೆಯಲು ಟ್ವಿಟರ್ ನಿರಾಕರಿಸಿದ ನಂತರ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್) ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದು, ಪೋಸ್ಟ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸಿದೆ ಮತ್ತು ಟ್ವೀಟ್ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ ಎಂದು indianexpress.com ವರದಿ ಮಾಡಿದೆ.

ಆಗಸ್ಟ್‌ 2020ರಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಪ್ರಿಯಾಂಕ್‌ ಕನೂಂಗೊ ಎಂಬವು ದಿಲ್ಲಿ ಪೊಲೀಸರಿಗೆ ಝುಬೈರ್‌ ವಿರುದ್ಧ ದೂರು ಸಲ್ಲಿಸಿದ್ದರು. ಆಗಸ್ಟ್‌ 6ರಂದು ಅವರು ಮಾಡಿದ್ದ ಟ್ವೀಟ್‌ ನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮುಖವು ಅಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಕಳೆದ ವರ್ಷ ಈ ವಿಚಾರದಲ್ಲಿ ದಿಲ್ಲಿ ಹೈಕೋರ್ಟ್‌, ಝುಬೈರ್‌ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿತ್ತು. 

ಅಪ್ರಾಪ್ತ ಬಾಲಕಿಯ ಮುಖವನ್ನು ಪಿಕ್ಸೆಲ್‌ ಮುಖಾಂತರ ಮರೆಮಾಡಿರುವ ಕಾರಣ ಟ್ವೀಟ್‌ ತೆರವುಗೊಳಿಸುವುದಿಲ್ಲ ಎಂದು ಟ್ವಿಟರ್‌ ಹೇಳಿತ್ತು. ಆಗ ಟ್ವಿಟರ್‌ ಮುಖ್ಯಸ್ಥರಾಗಿದ್ದ ಮನೀಶ್‌ ಮಹೇಶ್ವರಿ ಹಾಗೂ ಸಿಇಒ ಜಾಕ್‌ ಡೋರ್ಸಿ ವಿರುದ್ಧವೂ ಕ್ರಮ ಕೈಗೊಳ್ಳಲು ದಿಲ್ಲಿ ಪೊಲೀಸರು ಬಯಸಿದ್ದರು ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಉತ್ತಮ ಮಕ್ಕಳ ಕಲ್ಯಾಣಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುವ ಬದಲು ಸರ್ಕಾರವನ್ನು ಟೀಕಿಸುವವರ ಹಿಂದೆ ಹೋಗುತ್ತಿದ್ದಾರೆ ಎಂದು ಇತ್ತೀಚಿನ ದಿನಗಳಲ್ಲಿ ಎನ್‌ಸಿಪಿಸಿಆರ್ ಮೇಲೆ ಸಾರ್ವಜನಿಕರು ಆರೋಪಿಸುತ್ತಿದ್ದಾರೆ ಎಂದು thewire.in ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News