ಸೋನಿಯಾ ಗಾಂಧಿ ಪಂಜಾಬ್ ಗೆ ಹೊಸ ಸಿಎಂ ಆಯ್ಕೆ ಮಾಡುತ್ತಾರೆ:ಹರೀಶ್ ರಾವತ್

Update: 2021-09-18 15:17 GMT

ಚಂಡಿಗಡ: ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆಯಿಂದ ತೆರವಾಗಿರುವ ಪಂಜಾಬ್  ಮುಖ್ಯಮಂತ್ರಿ ಅಭ್ಯರ್ಥಿಯನ್ನು  ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆಯ್ಕೆ ಮಾಡುತ್ತಾರೆ ಎಂದು ಚಂಡೀಗಡದಲ್ಲಿ ನಡೆದ ಶಾಸಕಾಂಗ ಸಭೆಯ ಬಳಿಕ ಪಕ್ಷದ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಹೇಳಿದ್ದಾರೆ.

ಶಾಸಕರು ಇಂದು ಎರಡು ನಿರ್ಣಯಗಳನ್ನು ಅಂಗೀಕರಿಸಿದ್ದಾರೆ. ಮೊದಲ ನಿರ್ಣಯದಲ್ಲಿ ಸಿಂಗ್ ಅವರ ಅಧಿಕಾರಾವಧಿಗೆ ಧನ್ಯವಾದಗಳನ್ನು ತಿಳಿಸಲಾಯಿತು. ಎರಡನೆ ನಿರ್ಣಯದಲ್ಲಿ ಮುಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಸೋನಿಯಾ ಗಾಂಧಿಗೆ ಅಧಿಕಾರ ನೀಡಲಾಯಿತು ಎಂದರು.

"ನಾವು ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಅಂಗೀಕರಿಸಲ್ಪಟ್ಟ ಎರಡು ನಿರ್ಣಯಗಳನ್ನು ಪಕ್ಷದ ಹೈಕಮಾಂಡ್‌ಗೆ ಕಳುಹಿಸಿದ್ದೇವೆ. ಅವರ (ಪಕ್ಷದ ಹೈಕಮಾಂಡ್) ನಿರ್ಧಾರಕ್ಕಾಗಿ ನಾವು ಕಾಯುತ್ತಿದ್ದೇವೆ" ಎಂದು ರಾವತ್ ಹೇಳಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಹೆಸರಿನ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಇಂದಿನ ಸಭೆಯಲ್ಲಿ ಪಕ್ಷದ 80 ಶಾಸಕರಲ್ಲಿ 78 ಮಂದಿ ಹಾಜರಿದ್ದರು. ಪಕ್ಷವು ಅಮರಿಂದರ್ ಸಿಂಗ್ ಅವರಿಂದ ಮುಂದೆಯೂ ಮಾರ್ಗದರ್ಶನವನ್ನು ಪಡೆಯುವುದನ್ನು ನಿರೀಕ್ಷಿಸುತ್ತೇವೆ" ಎಂದು ಪಂಜಾಬ್‌ನ ಕಾಂಗ್ರೆಸ್ ವೀಕ್ಷಕ ಅಜಯ್ ಮಾಕೆನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News