ವಿಚಾರಣೆಗೆ ಹಾಜರಾಗದ ಅನಿಲ್ ದೇಶಮುಖ್: ಈ.ಡಿ.ಯಿಂದ ನ್ಯಾಯಾಲಯಕ್ಕೆ ಮನವಿ ಸಲ್ಲಿಕೆ

Update: 2021-09-18 17:49 GMT

ಮುಂಬೈ, ಸೆ. 18: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಗೈರು ಹಾಜರಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮೆಟ್ಟಿಲೇರಿದೆ. 

ಐಪಿಸಿ ಕಲಂ 174ರ ಅಡಿಯಲ್ಲಿ ದೇಶಮುಖ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಾರಿ ನಿರ್ದೇಶನಾಲಯ ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. 

ಈ ಕಲಂ ಅಡಿಯಲ್ಲಿ ಒಂದು ತಿಂಗಳು ಸರಳ ಜೈಲು ಶಿಕ್ಷೆ ಅಥವಾ 500 ರೂಪಾಯಿ ದಂಡ, ಇಲ್ಲವೇ ಎರಡನ್ನೂ ವಿಧಿಸಲು ಅವಕಾಶವಿದೆ. ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ದೇಶಮುಖ್ ಅವರ ವಿರುದ್ಧ ಹಲವು ಸಮನ್ಸ್ಗಳನ್ನು ನೀಡಿತ್ತು. ಆದರೆ, ದೇಶಮುಖ್ ಅವರು ಹಾಜರಾಗಲು ವಿಫಲರಾಗಿದ್ದರು. ಈ ಪ್ರಕರಣದಲ್ಲಿ ದೇಶಮುಖ್ ಅವರ ಇಬ್ಬರು ಸಹಾಯಕರಾದ ಸಂಜೀವ್ ಪಾಲಂಡೆ ಹಾಗೂ ಕುಂದನ್ ಶಿಂಧೆ ಅವರನ್ನು ಬಂಧಿಸಲಾಗಿತ್ತು. ಪ್ರಸಕ್ತ ಅವರು ಕಸ್ಟಡಿಯಲ್ಲಿ ಇದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News