ಸುಖ್ ಜಿಂದರ್ ರಂಧಾವ ಪಂಜಾಬ್ ನೂತನ ಮುಖ್ಯಮಂತ್ರಿ ಸಾಧ್ಯತೆ

Update: 2021-09-19 11:52 GMT
Image Source : TWITTER/@SUKHJINDER_INC

ಹೊಸದಿಲ್ಲಿ: ಮಾಜಿ ಸಚಿವ ಸುಖ್ ಜಿಂದರ್  ಸಿಂಗ್ ರಂಧಾವ ಪಂಜಾಬ್ ನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಖ್ ಜಿಂದರ್ ರಾಂಧವ ಕುರಿತು ಶೀಘ್ರವೇ ಅಧಿಕೃತ ಘೋಷಣೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರೀತಮ್ ಸಿಂಗ್ ಹೇಳಿದ್ದಾರೆ.

ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷ(ಸಿಎಲ್ ಪಿ) ಹೊಸ ನಾಯಕನ  ಹೆಸರನ್ನು ಅಂತಿಮಗೊಳಿಸುವ ಕುರಿತು ಶನಿವಾರದಿಂದ ನಿರಂತರ ಸಭೆ ನಡೆಸಲಾಗುತ್ತಿದೆ.

ಪಂಜಾಬ್ ಶಾಸಕರೊಂದಿಗೆ ಚರ್ಚಿಸಿದ ನಂತರ ಸಿಎಂ ಹುದ್ದೆಗೆ ಸುಖ್ ಜಿಂದರ್ ರಂಧಾವ ಹೆಸರನ್ನು ಎಐಸಿಸಿ ಪ್ರಸ್ತಾಪಿಸಿದೆ. ದಿಲ್ಲಿಯಲ್ಲಿ ಅಂಬಿಕಾ ಸೋನಿ ಜೊತೆ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಯುತ್ತಿದೆ ಎಂದು  ಮೂಲಗಳು  ತಿಳಿಸಿವೆ ಎಂದು ANI ವರದಿ ಮಾಡಿದೆ.

ಮೂರು ಬಾರಿ ಶಾಸಕರಾಗಿರುವ 62ರ ವಯಸ್ಸಿನ ರಾಂಧವ ಅವರು ಅಮರಿಂದರ್ ಸಿಂಗ್ ಸಂಪುಟದಲ್ಲಿ ಜೈಲು ಹಾಗೂ  ಸಹಕಾರ ಸಚಿವರಾಗಿದ್ದರು. ಗುರುದಾಸ್‌ಪುರ ಜಿಲ್ಲೆಯವರಾದ ರಂಧಾವ ಅವರು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ಅವರ ತಂದೆ ಸಂತೋಖ್ ಸಿಂಗ್ ಎರಡು ಬಾರಿ ಅಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News