ಐಪಿಎಲ್: ಋತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟ, ಚೆನ್ನೈ 156/6

Update: 2021-09-19 16:05 GMT
photo: twitter.com/WisdenIndia

  ದುಬೈ, ಸೆ.19: ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಏಕಾಂಗಿ ಹೋರಾಟದ(ಔಟಾಗದೆ 88 ರನ್)ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರವಿವಾರ ನಡೆದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಟ್ವೆಂಟಿ-20 ಟೂರ್ನಿಯ 30ನೇ ಪಂದ್ಯದಲ್ಲಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ.
  ಟ್ರೆಂಟ್ ಬೌಲ್ಟ್ (2-35)ನೇತೃತ್ವದ ಬೌಲರ್‌ಗಳ ದಾಳಿಗೆ ತತ್ತರಿಸಿದ ಚೆನ್ನೈ ಒಂದು ಹಂತದಲ್ಲಿ 24 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಆಸರೆಯಾಗಿ ನಿಂತವರು ಗಾಯಕ್ವಾಡ್. 58 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್ ಗಳನ್ನು ಗಳಿಸಿರುವ ಗಾಯಕ್ವಾಡ್‌ಗೆ ಉಳಿದ ಆಟಗಾರರಿಂದ ಸರಿಯಾದ ಸಾಥ್ ಸಿಗಲಿಲ್ಲ. ರವೀಂದ್ರ ಜಡೇಜ(26), ಡ್ವೇಯ್ನಾ ಬ್ರಾವೊ(23) ಎರಡಂಕೆಯ ಸ್ಕೋರ್ ಗಳಿಸಿದರು.

ಪ್ಲೆಸಿಸ್(0), ಮೊಯಿನ್ ಅಲಿ(0), ಅಂಬಟಿ ರಾಯುಡು(0)ಶೂನ್ಯಕ್ಕೆ ಔಟಾಗಿರುವುದು ಚೆನ್ನೈ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಗಿತ್ತು. ನಾಯಕ ಎಂ .ಎಸ್. ಧೋನಿ 5 ಎಸೆತಗಳನ್ನು ಎದುರಿಸಿ 3 ರನ್ ಗಳಿಸಿದರು. ಸುರೇಶ್ ರೈನಾ 4 ರನ್ ಗಳಿಸಲಷ್ಟೇ ಶಕ್ತರಾದರು. ಬೌಲ್ಟ್, ಆಡಮ್ ಮಿಲ್ನೆ(2-21), ಜಸ್‌ಪ್ರೀತ್ ಬುಮ್ರಾ(2-33)ತಲಾ ಎರಡು ವಿಕೆಟ್ ಪಡೆದು ಚೆನ್ನೈಗೆ ಸವಾಲಾದರು. ್‌..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News