ಟ್ಯಾಲೆಂಟ್: ಮೊಬೈಲ್ ಟೆಕ್ನಿಕಲ್ ಕೋರ್ಸ್ 38ನೆ ಬ್ಯಾಚ್‍ ಉದ್ಘಾಟನಾ ಸಮಾರಂಭ

Update: 2021-09-20 05:08 GMT

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ನಡೆಸಲ್ಪಡುವ ಮೊಬೈಲ್ ಟೆಕ್ನಿನಿಶಿಯನ್ ಕೋರ್ಸ್‍ನ 38ನೆ ಬ್ಯಾಚ್ ಉದ್ಘಾಟಣೆ ಮತ್ತು 37ನೆ ಬ್ಯಾಚಿನ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಮಾರಂಭವನ್ನು ಫಾರ್ಚೂನ್ ಪ್ರೊಮೋಟರ್ಸ್ ಇದರ ಮ್ಯಾನೇಜಿಂಗ್ ಪಾರ್ಟ್‍ನರ್  ಅಬುಲಾಲ ಪುತ್ತಿಗೆ ಗಿಡ್ಟಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ಒಬ್ಬರಿಗೆ ನಾವು ಮೀನು ಕೊಟ್ಟರೆ ಅದು ಒಂದು ಹೊತ್ತಿನ ಆಹಾರ, ಅವರಿಗೆ ಮೀನು ಹಿಡಿಯಲು ಕಲಿಸಿಕೊಟ್ಟರೆ ಅವರ ಜೀವನ ಪೂರ್ತಿ ಕುಟುಂಬವನ್ನು ಸಾಕಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕಧ್ಯಕ್ಷರಾದ ಅಬ್ದುಲ್ ರವೂಫ್ ಪುತ್ತಿಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನೂರ್ ಮುಹಮ್ಮದ್ (ಎಮ್.ಡಿ ಎನ್ಮಾರ್ಕ್ ಬಿಲ್ಡರ್ಸ್), ಅವೇಶ್ ಅಮೀನ್ (ಮ್ಯಾನೇಜಿಂಗ್ ಪಾರ್ಟ್‍ನರ್ ಅಬಾಬಿಲ್ ಎಕ್ಸ್ ಪೋರ್ಟ್ಸ್), ಮುಹಮ್ಮದ್ ಶಮೀಮ್ ಅಬ್ಬಾಸ್ (ಜಾಪ್ಕಲ್ ಪ್ರೈವೇಟ್ ಲಿಮಿಟೆಡ್), ಅಬ್ದುಲ್ ರಾಝಿಕ್ ಅಲಿ ( ಎಮ್.ಡಿ. ರಾ ಸಾಫ್ಟ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್), ಬಿ.ಎ ಇಕ್ಬಾಲ್ (ಕರೆಸ್ಪಾಂಡೆಂಟ್, ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ), ನಝೀರ್ ಅಹ್ಮದ್ (ಬೂಟ್ ಬಜಾರ್) ಮತ್ತು  ಸುಲೈಮಾನ್ ಶೇಖ್ ಬೆಳುವಾಯಿ (ಟಿ.ಆರ್.ಎಫ್ ಸಲಹೆಗಾರರು) ಉಪಸ್ಥಿತರಿದ್ದು ಶುಭ ಹಾರೈಸಿದರು.

ರಿಯಾಝ್ ಕಣ್ಣೂರು ಪ್ರಸ್ತಾವನೆಗೈದು, ಸ್ವಾಗತಿಸಿದ್ದರು. ಮೊಬೈಲ್ ಕೋರ್ಸ್ ವಿದ್ಯಾರ್ಥಿ ಇಯಾಝ್ ಅಹ್ಮದ್ ಖಿರಾಅತ್ ಪಠಿಸಿದರು. ನಕಾಶ್ ಬಾಂಬಿಲ ಸರ್ಟಿಫಿಕೇಟ್ ವಾಚಿಸಿದರು. ಮೊಬೈಲ್ ಟೆಕ್ನಿಶಿಯನ್ ಶಿಕ್ಷಕ ಅಬ್ದುಲ್ ಮಜೀದ್ ತುಂಬೆ ವಂದಿಸಿದರು. ಡಿ ಅಬ್ದುಲ್ ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು. ಹಕೀಮ್ ಬಜಾಲ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News