ಮಾಸ್ತಿಕಟ್ಟೆ : ದೇವಸ್ಥಾನಕ್ಕೆ ನುಗ್ಗಿ ಸೊತ್ತು ಕಳವು

Update: 2021-09-20 06:46 GMT

ಮಂಗಳೂರು : ಮಾಸ್ತಿಕಟ್ಟೆ ಕುಮೇರು ಪಾಡಾಂಗರ ಪೂಮಾಲೆ ಭಗವತೀ ಕ್ಷೇತ್ರದ ಅಣ್ಣಪ್ಪ ದೇವಸ್ಥಾನದ ಸೊತ್ತು ಕಳವು ನಡೆದ ಘಟನೆ  ರವಿವಾರ ತಡರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಮಾಸ್ತಿಕಟ್ಟೆಯ ತೀಯ ಸಮಾಜ ಕುಟುಂಬಸ್ಥರ ಆರಾಧ್ಯ ಕುಮೇರು ಪಾಡಂಗರ ಪೂಮಾಲೆ ಭಗವತೀ ಕ್ಷೇತ್ರದ ಅಣ್ಣಪ್ಪ ದೈವದ ಗುಡಿಯ ಬಾಗಿಲ ಬೀಗ ಒಡೆದು ಪಂಚಲೋಹದ ಮೊಗವನ್ನ ಕಳ್ಳತನ ನಡೆಸಿದ್ದಾರೆ.

ಇದನ್ನು ಗಮನಿಸಿದ ಸ್ಥಳೀಯರೊಬ್ಬರು ದೈವಸ್ಥಾನದ ಮುಖ್ಯ ಅರ್ಚಕರಿಗೆ ಮಾಹಿತಿ ನೀಡಿದ್ದು, ಅವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News